
ಯಡಿಯೂರಪ್ಪ ಅವರು ಬಿಜೆಪಿ ಶಾಸಕರಿಗೆ ಸೂಚನೆಯನ್ನು ರವಾನಿಸಿದ್ದು, ಎರಡೂ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರು ಕಡ್ಡಾಯವಾಗಿ ಎರಡೂ ಕ್ಷೇತ್ರದಲ್ಲಿ ಪ್ರಚಾರ ಮಾಡಲೇ ಬೇಕು ಎಂದಿರುವ ಯಡಿಯೂರಪ್ಪ ಅವರು ದಕ್ಷಿಣದ ಶಾಸಕರು ಹಾಗೂ ಖ್ಯಾತಿ ಹೊಂದಿರುವ ಶಾಸಕರನ್ನು ಸಹ ಕ್ಷೇತ್ರಗಳಿಗೆ ಆಹ್ವಾನಿಸಿದ್ದಾರೆ.
ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆಗಳು ರಾಜ್ಯ ರಾಜಕಾರಣದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಕಾಂಗ್ರೆಸ್ – ಬಿಜೆಪಿ ಎರಡೂ ಪಕ್ಷಗಳು ಈ ಉಪಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ.
ಬಿಜೆಪಿಯು ಈಗಾಗಲೇ ಎರಡೂ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ್ದು ನಾಮಪತ್ರ ಸಲ್ಲಿಕೆ ಸಹ ಆಗಿ, ಪ್ರಚಾರ ಕಾರ್ಯ ಆರಂಭಿಸಿದೆ. ಈ ಉಪಚುನಾವಣೆ ಗೆಲವು ಬಿಜೆಪಿಯ ಸಂಖ್ಯಾಬಲ ಹೆಚ್ಚಿಸಿ ಅಧಿಕಾರಕ್ಕೆ ಇನ್ನಷ್ಟು ಹತ್ತಿರ ಮಾಡಲಿದೆ.















