Wednesday, March 18, 2026
ಸುದ್ದಿ

ಬಹಿರಂಗವಾಯ್ತು ಶ್ರೀಲಂಕಾ ದಾಳಿಯ ಕಾರಣ – ಕಹಳೆ ನ್ಯೂಸ್

ಏ.21 ರಂದು ಜಗತ್ತಿನಾದ್ಯಂತ ಜನರು ಈಸ್ಟರ್ ಹಬ್ಬದ ಸಂಭ್ರಮದಲ್ಲಿದ್ದರು. ದ್ವೀಪರಾಷ್ಟ್ರದಲ್ಲಿ ಒಂಬತ್ತು ಕಡೆ ಚರ್ಚ್, ರೆಸ್ಟೋರೆಂಟ್‍ಗಳಲ್ಲಿ ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಗುರುವಾರ ಏ.25 ರ ಹೊತ್ತಿಗೆ ಮೃತರ ಸಂಖ್ಯೆ 350 ಮಂದಿ ತಲುಪಿತ್ತು. ಈ ದಾಳಿಗೆ ಸಂಬಂಧಿಸಿದಂತೆ ಕಾರಣ ಬಹಿರಂಗವಾಗಿದೆ.

ಸಿರಿಯಾದಲ್ಲಿ ತಮ್ಮ ಸಂಘಟನೆಯನ್ನು ನಿರ್ಮೂಲನೆ ಮಾಡಿದಕ್ಕೆ ಪ್ರತಿಯಾಗಿ ಲಂಕಾದಲ್ಲಿ ಸರಣಿ ದಾಳಿ ನಡೆಸಲಾಯ್ತು ಎಂದು ಐಸಿಎಸ್ ಮುಖ್ಯಸ್ಥ ಅಬೂಬಕರ್ ಬಗ್ದಾದಿ ಹೇಳಿಕೊಂಡಿದ್ದಾನೆ. ಇದು, ನ್ಯೂಜಿಲೆಂಡ್‍ನ ಕ್ರೈಸ್ಟ್‍ಚರ್ಚ್ ಮಸೀದಿ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಲಂಕಾದ ಮೇಲೆ ದಾಳಿ ನಡೆಸಲಾಗಿತ್ತು ಎಂಬ ಉಗ್ರರು ಇತ್ತೀಚಿಗಿನ ಹೇಳಿಕೆಗೆ ಪೂರ್ಣ ಉಲ್ಟಾ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಹಲವು ಬಾರಿ ಸಾವನ್ನಪ್ಪಿದ್ದಾನೆ ಎಂದು ಹೇಳಲ್ಪಟ್ಟಿದ್ದ ಬಗ್ದಾದಿ, ಇದೀಗ ದಿಢೀರನೆ ಹೊಸ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಲಂಕಾ ದಾಳಿಯ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ.

ಜಾಹೀರಾತು
ಜಾಹೀರಾತು

ಈ ವಿಡಿಯೋವನ್ನು ಅಮೇರಿಕ ಮೂಲದ ‘ಸೈಟ್’ ಎಂಬ ಗುಪ್ತಚರ ಸಂಸ್ಥೆ ಖಚಿತಪಡಿಸಿದೆ. ವಿಡಿಯೋದಲ್ಲಿ ಲಂಕಾ ದಾಳಿ ಬಗ್ಗೆ ಬಗ್ದಾದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. 18 ನಿಮಿಷಗಳ ಈ ವಿಡಿಯೋ ಲಂಕಾ ದಾಳಿಗೆ ಮುನ್ನವೇ ದಾಖಲಿಸಿದ್ದು ಎಂಬುದು ಖಚಿತಪಟ್ಟಿದೆ. 2014ರಲ್ಲಿ ವಿಡಿಯೋವೊಂದರಲ್ಲಿ ಕಾಣಿಸಿಕೊಂಡ ಬಳಿಕ ಮತ್ತೆ ಬಗ್ದಾದಿ ಸುಮಾರು 5 ವರ್ಷಗಳ ಬಳಿಕ ವಿಡಿಯೋದಲ್ಲಿ ಪ್ರತ್ಯಕ್ಷನಾಗಿದ್ದಾನೆ.