
ಬೆಳಗಾವಿ: ಈ ಭಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಕಳಪೆ ಶೈಕ್ಷಣಿಕ ಪ್ರದರ್ಶನ ನೀಡಿವೆ. ಶೈಕ್ಷಣಿಕ ಜಿಲ್ಲೆ ರಾಜ್ಯಕ್ಕೆ 13ನೇ ಸ್ಥಾನ ಗಿಟ್ಟಿಸಿದರೆ, ಬೆಳಗಾವಿ ಜಿಲ್ಲೆ 24ನೇ ಸ್ಥಾನದತ್ತ ಇಳಿಮುಖ ಮಾಡಿದೆ. ಎಸ್‍ಎಸ್‍ಎಲ್‍ಸಿಯಲ್ಲಿ ಸತತ ಮುನ್ನಡೆಯಲ್ಲಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಫಲಿತಾಂಶ ಶಿಕ್ಷಣಾಧಿಕಾರಿಗಳಿಗೆ ಪೆಚ್ಚು ಮೋರೆ ಹಾಕುವಂತೆ ಮಾಡಿದೆ. ಪಿಯುಸಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ಜಿಲ್ಲೆ ಈಗ ಎಸ್ಸೆಸ್ಸೆಲ್ಸಿ ಫಲಿತಾಂಶ ಸಮಾಧಾನ ಸಹ ನೀಡುವಲ್ಲಿಯೂ ವಿಫಲವಾಗಿದೆ.















