Wednesday, March 18, 2026
ರಾಜಕೀಯಸುದ್ದಿ

ವಂದೇ ಮಾತರಂ ಘೋಷಣೆಗೆ ಸ್ಪಂದಿಸದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ – ಕಹಳೆ ನ್ಯೂಸ್

ಪ್ರಧಾನಿ ಹಾಗು ವೇದಿಕೆಯಲ್ಲಿದ್ದ ಎಲ್ಲ ನಾಯಕರೂ ಬಿಹಾರದ ದಭರ್ಂಗದಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ವಂದೇ ಮಾತರಂ ಘೋಷಣೆ ಕೂಗುತ್ತಿದ್ದಾಗ ಎನ್ ಡಿ ಎ ಮೈತ್ರಿಕೂಟದ ಪ್ರಮುಖ ಪಕ್ಷ ಜೆಡಿಯು ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಗಪ್‍ಚುಪ್ ಆಗಿ ಕುಳಿತುಕೊಂಡ ವೀಡಿಯೊ ವೈರಲ್ ಆಗಿದೆ.

ವಂದೇ ಮಾತರಂ ಹೆಸರಲ್ಲಿ ಅಲ್ಪಸಂಖ್ಯಾತರ ಮೇಲೆ ಹರಿಹಾಯುವ ಒಂದೇ ಒಂದು ಅವಕಾಶ ಕೈಬಿಡದ ಬಿಜೆಪಿ ಹಾಗು ಸಂಘ ಪರಿವಾರ ನಿತೀಶ್ ಕುಮಾರ್ ಅವರು ಖುದ್ದು ಪ್ರಧಾನಿಯೇ ವಂದೇ ಮಾತರಂ ಘೋಷಣೆ ಕೂಗುತ್ತಿರುವಾಗ ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಕುಳಿತಿದ್ದು ಅನೇಕರ ಬಾಯಿಗೆ ತುತ್ತಾಗಿದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ, ಜೆಡಿಯು ಜಂಟಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಷಣ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಭಾರತ್ ಮಾತಾಕಿ ಜೈ ಎಂದು ಬಳಿಕ ವಂದೇ ಮಾತರಂ ಎಂದು ಘೋಷಣೆ ಕೂಗಿದಾಗ ಎಲ್ಲರೂ ಮಾತರಂ ಎಂದು ಕೂಗುತ್ತಿದ್ದರು. ಬಿಜೆಪಿ ನಾಯಕರು ಮಾತ್ರವಲ್ಲದೆ ವೇದಿಕೆಯಲ್ಲಿದ್ದ ಎನ್ ಡಿ ಎ ಮಿತ್ರಪಕ್ಷ ಲೋಕಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಕೂಡ ಇದಕ್ಕೆ ಧ್ವನಿಗೂಡಿಸುತ್ತಾರೆ. ಆದರೆ ಬಿಹಾರ ಮುಖ್ಯಮಂತ್ರಿ ಹಾಗು ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ವೇದಿಕೆಯಲ್ಲಿದ್ದರೂ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಕೈ ಎತ್ತುವುದೂ ಇಲ್ಲ, ಘೋಷಣೆಗೆ ಧ್ವನಿಗೂಡಿಸುವುದೂ ಇಲ್ಲ. ಆದರೆ ಕೊನೆಗೆ ಪ್ರಧಾನಿ ಅಲ್ಲಿಂದ ಹೊರಡುವಾಗ ಎದ್ದು ನಿಂತು ಪ್ರಧಾನಿಗೆ ನಮಸ್ಕರಿಸಿದರು.

ಜಾಹೀರಾತು
ಜಾಹೀರಾತು

ವಂದೇ ಮಾತರಂ ಘೋಷಣೆ ಕೂಗುವುದು, ಅದನ್ನು ಹಾಡುವುದು ದೇಶಭಕ್ತಿಯ ಸಂಕೇತ, ಅದನ್ನು ಹಾಡದವರು, ಘೋಷಣೆ ಕೂಗದವರು ಭಾರತದಲ್ಲಿ ಇರಲೇಬಾರದು ಎಂದು ಬಿಜೆಪಿ, ಸಂಘ ಪರಿವಾರದ ನಾಯಕರು ಅದೆಷ್ಟೋ ಬಾರಿ ಹೇಳಿದ್ದಾರೆ. ಅದರ ಹೆಸರಲ್ಲಿ ಅದೆಷ್ಟೋ ಗಲಾಟೆ, ಗಲಭೆಗಳಾಗಿವೆ. ಆದರೆ ತಮ್ಮ ಮೈತ್ರಿಕೂಟದ ಅತ್ಯಂತ ಪ್ರಮುಖ ಪಾಲುದಾರ ನಾಯಕ ಪ್ರಧಾನಿ ಇದ್ದ ವೇದಿಕೆಯಲ್ಲೇ, ಪ್ರಧಾನಿಯೇ ಸ್ವತಃ ವಂದೇ ಮಾತರಂ ಘೋಷಣೆ ಕೂಗುತ್ತಿರುವಾಗ ಅದಕ್ಕೆ ಕಿಮ್ಮತ್ತಿನ ಬೆಲೆ ನೀಡದೆ ಸುಮ್ಮನಿದ್ದ ಬಗ್ಗೆ ಯಾವುದೇ ಬಿಜೆಪಿ ನಾಯಕರು ಈವರೆಗೆ ತಕರಾರು ಕೂಡ ಎತ್ತದೇ ಇರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಬಿಜೆಪಿಗೆ ವಂದೇ ಮಾತರಂ ಗಿಂತ ಮುಖ್ಯವೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ.