Wednesday, March 18, 2026
ಸುದ್ದಿ

5 ವರ್ಷದ ನಂತರ ಪ್ರತ್ಯಕ್ಷನಾದ ಐಸಿಸ್ ಮುಖಂಡನಿಂದ ವಿಡಿಯೋ ರಿಲೀಸ್ – ಕಹಳೆ ನ್ಯೂಸ್

ನವದೆಹಲಿ: ಭಯೋತ್ಪಾದಕ ಸಂಘಟನೆ ಐಸಿಸ್‍ನ ಭಯೋತ್ಪಾದಕ ಮುಖಂಡ ಅಬುಬಕರ್ ಅಲ್ ಬಾಗ್ದಾದಿಯ ವಿಡಿಯೋ ಬಿಡುಗಡೆ ಮಾಡಿ ಶಾಕಿಂಗ್ ನ್ಯೂಸ್ ನೀಡಿದೆ. ಸತ್ತು ಹೋಗಿದ್ದಾನೆಂದು ಜಗತ್ತು ನಂಬಿದ್ದ ಉಗ್ರನ ವಿಡಿಯೋ ಒಂದು ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿದೆ. ವಿಡಿಯೋದಲ್ಲಿ ಬಾಗ್ದಾದಿ ತಾನಿನ್ನೂ ಬಲಿಷ್ಠವಾಗಿದ್ದೀನಿ. ಮತ್ತಷ್ಟು ವಿಧ್ವಂಸಕ ಕೃತ್ಯ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾನೆ.

ಭಯೋತ್ಪಾದಕ ಮುಖಂಡ ಬಾಗ್ದಾದಿ ದಟ್ಟ ಗಡ್ಡ ಬಿಟ್ಟಕೊಂಡು, ಕಪ್ಪು ಬಣ್ಣದ ಬಟ್ಟೆ ಧರಿಸಿ, ಪಕ್ಕದಲ್ಲಿಯೇ ಆಯುಧವಿರಿಸಿಕೊಂಡು ನೆಲದಲ್ಲಿ ಕುಳಿತಿರುವ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾನೆ. ವಿಡಿಯೋದಲ್ಲಿ 18 ನಿಮಿಷಗಳ ಕಾಲ ಮಾತನಾಡಿರುವ ಬಾಗ್ದಾದಿಯ ಸುತ್ತ ಮುಖಮುಚ್ಚಿಕೊಂಡು ಅವನ ಸಹಚರರೂ ನಿಂತಿರುವುದು ವಿಡಿಯೋದಲ್ಲಿ ದಾಖಲಾಗಿದೆ. 2015ರಲ್ಲಿ ಬಾಗ್ದಾದಿ ಮೃತಪಟ್ಟಿದ್ದಾನೆಂದು ವರದಿಯಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು