Friday, March 13, 2026
ಸುದ್ದಿ

ದಿ. ಸುಮತಿ ಬಾಯಿಯ ಸವಿ ನೆನಪಿಗಾಗಿ ಬೃಹತ್ ನೇತ್ರದಾನ ಶಿಬಿರ – ಕಹಳೆ ನ್ಯೂಸ್

ಮಂಗಳೂರು: ನೀರುಮಾರ್ಗ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಹಿಂದೂ ಹೃದಯ ಸಾಮ್ರಾಟ್ ಪ್ರಮೋದ್’ಜೀ ಮುತಾಲಿಕ್‍ರ ತಾಯಿ ದಿ. ಸುಮತಿ ಬಾಯಿಯ ಸವಿ ನೆನಪಿಗಾಗಿ ಶ್ರೀರಾಮಸೇನೆ ನೀರುಮಾರ್ಗ ಪ್ರಖಂಡದ ವತಿಯಿಂದ ಬೃಹತ್ ನೇತ್ರದಾನ ಶಿಬಿರ ನಡೆಯಿತು.

ಶ್ರೀರಾಮಸೇನೆ ಶಿವಾಜಿ ಶಾಖೆ ಅಡ್ಯಾರ್ ಪದವು, ಸುಬ್ರಹ್ಮಣ್ಯ ಶಾಖೆ ನೀರುಮಾರ್ಗ ಇವರ ನೇತೃತ್ವದಲ್ಲಿ, ಕೆಎಂಸಿ ಆಸ್ಪತ್ರೆ ಅತ್ತಾವರ, ಸಮುದಾಯ ದಂತ ವಿಭಾಗ ಯೆನಪೊಯ ದಂತ ಕಾಲೇಜು, ದೇರಳಕಟ್ಟೆ ಆಸ್ಪತ್ರೆ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ದಂತ ಚಿಕಿತ್ಸಾ ಶಿಬಿರ, ನೇತ್ರ ತಪಾಸಣಾ ಶಿಬಿರ, ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಮಂಗಳೂರು ಹಾಗೂ ಉಡುಪಿ ವಿಭಾಗಧ್ಯಕ್ಷರು ಜೀವನ್ ನೀರುಮಾರ್ಗ, ರಾಮ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೇಕಲ್ಲು, ಗ್ರಾಮ ಪಂಚಾಯಿತಿ ಅಧ್ಯಕ್ಷೆಕಸ್ತೂರಿ, ಯೇನಪೊಯ ದಂತ ವೈದ್ಯರಾಗಿರುವ ಡಾ. ಇಮ್ರಾನ್ ಪಾಷಾ, ಕೆಎಂಸಿ ಅತ್ತಾವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಹರ್ಬರ್ಟ್, ಯೇನಪೊಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಭರತ್, ಸುಬ್ರಹ್ಮಣ್ಯ ಭಜನಾ ಮಂಡಳಿಯ ಪ್ರಮುಖರಾದ ರಾಜೇಶ್ ನೀರುಮಾರ್ಗ ಹಾಗೂ ಅನಂತ ಆಚಾರ್ಯ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು