Recent Posts

Tuesday, March 10, 2026
ರಾಜಕೀಯಸುದ್ದಿ

ದೇವೇಗೌಡರು ಇನ್ನಿಬ್ಬರು ಮಕ್ಕಳಿಗಾಗಿ ಸಾಮ್ರಾಜ್ಯ ಸ್ಥಾಪಿಸಲು ತುಮಕೂರು ಜಿಲ್ಲೆಗೆ ಕಾಲಿಟ್ಟಿದ್ದಾರೆ : ಪುಟ್ಟಸ್ವಾಮಿ ವ್ಯಂಗ್ಯ – ಕಹಳೆ ನ್ಯೂಸ್

ಚಿತ್ರದುರ್ಗ: ಎಚ್.ಡಿ.ದೇವೇಗೌಡರು ತಮ್ಮ ಇನ್ನಿಬ್ಬರು ಮಕ್ಕಳಿಗಾಗಿ ತನ್ನ ಸಾಮ್ರಾಜ್ಯ ಸ್ಥಾಪಿಸಲು ತುಮಕೂರು ಜಿಲ್ಲೆಗೆ ಕಾಲಿಟ್ಟಿದ್ದಾರೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಪುಟ್ಟಸ್ವಾಮಿ ವ್ಯಂಗ್ಯವಾಡಿದರು.

ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪುಟ್ಟಸ್ವಾಮಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದೇವೇಗೌಡರು ಹಾಸನದಿಂದ ರಾಮನಗರಕ್ಕೆ ಬಂದು ಅದನ್ನು ಕುಮಾರಸ್ವಾಮಿಗೆ ಬಿಟ್ಟುಕೊಟ್ಟರು. ಮಂಡ್ಯವನ್ನು ಮೊಮ್ಮಗ ನಿಖಿಲ್ ಗೆ, ಈಗ ಮತ್ತೊಬ್ಬ ಮಗ ಬಾಲಕೃಷ್ಣ ಅವರಿಗೆ ತುಮಕೂರಿನಲ್ಲಿ ಸಾಮ್ರಾಜ್ಯ ನಿರ್ಮಾಣಕ್ಕೆ ಬಂದಿದ್ದಾರೆ ಎಂದು ಜರಿದರು.

ಜಾಹೀರಾತು
ಜಾಹೀರಾತು

ಮೋದಿ ಅವರ ಮಹಾಘಟಬಂಧನ ಅಸ್ತಿತ್ವಕ್ಕೆ ತಂದವರಿಗೆ ತಮ್ಮ ವಂಶಾಡಳಿತವನ್ನು ಮುಂದುವರಿಸಬೇಕಾಗಿದೆ. ಅವರಿಗೆ ದೇಶದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ತಮ್ಮ ವಂಶದವರಿಗೆ ಸಾಮ್ರಾಜ್ಯ ಕಟ್ಟಬೇಕಾಗಿದೆ. ಇದಕ್ಕಾಗಿ ಲಾಲೂ ಯಾದವ್, ಮುಲಾಯಂ ಸಿಂಗ್ ಯಾದವ್ ಮೊದಲಾದವರು ಒಟ್ಟಾಗಿದ್ದಾರೆ ಎಂದು ಆರೋಪಿಸಿದರು.