Wednesday, March 18, 2026
ಸುದ್ದಿ

ವಿದ್ಯುತ್ ಶಾಕ್ ದಂಪತಿಗಳಿಬ್ಬರು ಸಾವು – ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ವಿದ್ಯುತ್ ಶಾಕ್ ಆಗಿ ದಂಪತಿಗಳು ಮೃತಪಟ್ಟ ಘಟನೆ ನಡೆದಿದೆ. ರಾತ್ರಿ ಸುಮಾರು 9 ಗಂಟೆಗೆ ನಡೆದ ದುರ್ಘಟಣೆಯಲ್ಲಿ ಸಂಜೀವ ಮೂಲ್ಯ (55 ವ) ಮತ್ತು “ಶ್ರೀಮತಿ ಸರೊಜಿನಿ(50 ವ) ಮೂಲ್ಯ ಮೃತಪಟ್ಟ ನತದೃಷ್ಟರು.

ಸ್ವಿಚ್ ಬೊರ್ಡ್‍ನಲ್ಲಿ ಬೆಂಕಿ ಕಂಡಾಗ ಹೆಂಡತಿ ಸರೊಜಿನಿ ಮೂಲ್ಯರವರು ಪ್ಯುಸ್ ತೆಗೆಯಲು ಹೊಗಿದ್ದರು. ಅರಚಾಟ ಚೀರಾಟ ಕಂಡಾಗ ಗಂಡ ಸಂಜೀವ ಮೂಲ್ಯರು ಪತ್ನಿಯ ಸಹಾಯಕ್ಕೆ ಹೊಗಿದ್ದೇ ಅವರಿಗೆ ಮಾರಕವಾಯಿತು. ಸುಮಾರು 5-6 ಮನೆಗಳ ವಿದ್ಯುತ್ ಸಲಕರಣೆ ವಯರ್ ಎಲ್ಲಾ ಸುಟ್ಟು ಕರಕಲಾಗಿದೆ. ವಿದ್ಯುತ್‍ನ ತಾಂತ್ರಿಕ ದೊಷವೇ ಈ ಅನಾಹುತಕ್ಕೆ ಕಾರಣವೆಂದು ಮೇಲ್ನೊಟಕ್ಕೆ ಕಂಡಿದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಧರಣೇಂದ್ರ ಕುಮಾರ್ ಬೇಟಿ ನೀಡಿದರು. ಬೆಳ್ತಂಗಡಿ ವೃತ್ತ ನಿರೀಕ್ಷಕ ಶ್ರೀ ಸಂದೇಶ್, ತಾಲೂಕು ತಹಸಿಲ್ದಾರರು, ವೇಣೂರು ಕಂದಾಯ ಇಲಾಖೆಯೆ ಶ್ರೀ ಪವಾಡಪ್ಪ, ಶ್ರೀ ಅರವಿಂದ ಶೆಟ್ಟಿ, ಮಾಜಿ ಪಂಚಾಯತ್ ಅದ್ಯಕ್ಷರು ಶ್ರೀ ಸೂರ್ಯ, ಬೆಳ್ತಂಗಡಿ ಉಪವಿಭಾಗ ವಿದ್ಯುತ್ಚಕ್ತಿ ಇಂಜೀನಿಯರ್, ವೇಣೂರು ಮೆಸ್ಕೊಮ್ ಕಿರಿಯ ಇಂಜೀನಿಯರ್ ಶ್ರೀ ಬೂಬಶೆಟ್ಟಿ ಬೇಟಿ ನೀಡಿದರಲ್ಲದೆ, ಈ ಆಕಸ್ಮಿಕ ಮರಣವನ್ನು ನೊಡಲು ನೂರಾರು ಗ್ರಾಮಸ್ಥರು ಕೂಡಿದ್ದರು. ಪೊಸ್ಟ್ ಮಾರ್ಟಮ್‍ಗಾಗಿ ಶವಗಳನ್ನು ಅಂಬುಲನ್ಸ್ ಮುಖಾಂತರ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಜಾಹೀರಾತು
ಜಾಹೀರಾತು