Wednesday, March 18, 2026
ಸುದ್ದಿ

ಫಿಲೋಮಿನಾ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ – ಕಹಳೆ ನ್ಯೂಸ್

ಪುತ್ತೂರು: ಜೀವನದಲ್ಲಿ ಮುಗ್ದತೆಯ ಸ್ವಭಾವ ಬಹಳ ಮುಖ್ಯ. ಸತ್ಯಸಂದತೆ ಮತ್ತು ಪ್ರಾಮಾಣಿಕತೆಯನ್ನು ಜೀವನಪರ್ಯಂತ ಅಳವಡಿಸಿಕೊಂಡಾಗ ಯಶಸ್ಸನ್ನು ನಿಶ್ಚಿಂತೆಯಿಂದ ಜಯಿಸಬಹುದು ಎಂದು ಸಂತ ಫಿಲೋಮಿನಾ ಕಾಲೇಜಿನ ಸಂಚಾಲಕ ಅತಿ ವಂ. ಆಲ್ಫ್ರೆಡ್ ಜೆ ಪಿಂಟೊ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಾರ್ಚ್ 30 ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಜಾತಿ, ಮತ, ಧರ್ಮದ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ಅವಕಾಶಗಳಿವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನದಲ್ಲಿ ಯಶಸ್ಸಿನ ಗುರಿಯನ್ನು ಹೊಂದಿರಬೇಕು. ಮುಂದೆ ಬರುವ ವಿಶ್ವವಿದ್ಯಾನಿಲಯದ ಪರೀಕ್ಷೆಗೆ ಪೂರ್ವ ತಯಾರಿಯನ್ನು ಕೈಗೊಳ್ಳುವುದರ ಜೊತೆಗೆ ದೇಶದ ಮಹಾಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವ ಕರ್ತವ್ಯವನ್ನು ಮರೆಯಬಾರದು. ಉತ್ತಮ ಜನಪ್ರತಿನಿಧಿ ಆಯ್ಕೆಯಾದಲ್ಲಿ ದೇಶದಲ್ಲಿ ಶಾಂತಿ, ಸಮನ್ವಯತೆ, ಸುವ್ಯವಸ್ಥೆ ಮತ್ತು ಸುಭದ್ರ ಆಡಳಿತವನ್ನು ಕಾಣಬಹುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಸಮಾಜದಲ್ಲಿ ಸಾಧಕರು, ಬಾಧಕರು ಮತ್ತು ನಿಷ್ಪ್ರಯೋಜಕರು ಎಂಬ ಮೂರು ನಮೂನೆಯ ಜನರಿರುತ್ತಾರೆ. ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಸಾಧಕರಾಗಲು ಪ್ರಯತ್ನಿಸಬೇಕು. ಇತರರ ಸಾಧನೆಗೆ ಪ್ರೋತ್ಸಾಸ ನೀಡುವವರೂ ಸಾಧಕರ ಗುಂಪಿಗೆ ಸೇರುತ್ತಾರೆ. ಜೀವನದಲ್ಲಿ ಸಾರ್ಥಕ್ಯವನ್ನು ಹೊಂದಲು ಹೃದಯ ಶ್ರೀಮಂತಿಕೆ ಅತೀ ಮುಖ್ಯ ಎಂದರು.

ಜಾಹೀರಾತು
ಜಾಹೀರಾತು

ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗೆ ದಾಖಲಾಗುವ ಪ್ರಮುಖ ಉದ್ದೇಶವೇ ಜ್ಞಾನಾರ್ಜನೆ. ವಿದ್ಯಾರ್ಥಿ ಜೀವನದಲ್ಲಿ ಯಾವುದೇ ರೀತಿಯ ದುಶ್ಚಟಗಳಿಗೆ ದಾಸರಾಗದೆ ವಿದ್ಯಾರ್ಜನೆಯ ಕಡೆಗೆ ಹೆಚ್ಚಿನ ಒತ್ತು ನೀಡಿದಾಗ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಜಯ ಕುಮಾರ್ ಮೊಳೆಯಾರ ಮಾರ್ಗದರ್ಶನದಲ್ಲಿ ಕೀರ್ತಿ ಎಮ್ ಸಂಪಾದಕತ್ವದಲ್ಲಿ ದ್ವಿತೀಯ ಬಿಎಸ್ಸಿ ತರಗತಿಯ ಹಸ್ತಪತ್ರಿಕೆ ‘ವಜ್ರಲಿಪಿ’ ಮತ್ತು ಪವಿತ್ರ ಕೆ ಸಂಪಾದಕ್ವದಲ್ಲಿ ತೃತೀಯ ಬಿಎಸ್ಸಿಯ ಹಸ್ತಪತ್ರಿಕೆ ‘ಸ್ವರ್ಣಲಿಖಿತ’ ಹಾಗೂ ಸಹಾಯಕ ಪ್ರಾಧ್ಯಾಪಿಕೆ ಪ್ರಶಾಂತಿ ಎನ್ ರೈ ಮಾರ್ಗದರ್ಶನದಲ್ಲಿ ಪ್ರತೀಕ್ಷಾ ರೈ ಸಂಪಾದಕತ್ವದಲ್ಲಿ ತೃತೀಯ ಬಿಕಾಮ್ ‘ಸಿ’ ತರಗತಿ ವಿದ್ಯಾರ್ಥಿಗಳ ಹಸ್ತಪತ್ರಿಕೆ ‘ಫಿಲೋತ್ಕರ್ಷ’ ಅನಾರಣಗೊಂಡಿತು.

ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದಲ್ಲಿ ಶಿಕ್ಷಣ ಪಡೆದ ಮಂಗಳೂರು ವಿವಿಯ ಪ್ರಥಮ ರ್ಯಾಂಕು ವಿಜೇತೆ ಶ್ವೇತಲತಾ ಎ. ಇವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ, ಸಾಂಸ್ಕೃತಿಕ, ದೈಹಿಕ ಶಿಕ್ಷಣ, ರೋವರ್ಸ್-ರೇಂಜರ್ಸ್, ಎನ್‍ಎಸ್‍ಎಸ್, ಎನ್‍ಸಿಸಿ ಮುಂತಾದ ಕ್ಷೇತ್ರಗಳ ಸಾಧಕರನ್ನು ಪುರಸ್ಕರಿಸಲಾಯಿತು.

ರಂಗ ಕಲಾ ಸಂಘದ ಸದಸ್ಯರು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದನ್ ಕುಮಾರ್ ಜಿ ಸ್ವಾಗತಿಸಿದರು. ಕಾರ್ಯದರ್ಶಿ ಮಹಮ್ಮದ್ ಅಫೀಸ್ ವಿದ್ಯಾರ್ಥಿ ಸಂಘದ ವಾರ್ಷಿಕ ವರದಿ ಮಂಡಿಸಿದರು. ಜೊತೆ ಕಾರ್ಯದರ್ಶಿ ವಿಯೋಲಿನ್ ಲುಸಿಟ್ಟಾ ಡಿ’ಸೋಜ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ. ಕೆ ಚಂದ್ರಶೇಖರ್, ಭಾರತಿ ಎಸ್ ರೈ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು. ವಿದ್ಯಾರ್ಥಿನಿ ರೋಶನಿ ಎಮ್ ವೈ ನಿರೂಪಿಸಿದರು.