
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಶ್ವೇತಲತಾ ಎ. ಇವರು ಮಂಗಳೂರು ವಿಶ್ವವಿದ್ಯಾನಿಲಯವು ಮೇ 2018 ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕು ಗಳಿಸಿದ್ದು, ಇವರನ್ನು ಕಾಲೇಜಿನ ಸಂಚಾಲಕ ಅತಿ ವಂ. ಆಲ್ಫ್ರೆಡ್ ಜೆ ಪಿಂಟೊ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಸನ್ಮಾನಿಸಿದರು.
ಇವರು ಅರ್ಥಶಾಸ್ತ್ರ ಎಂಎ ಪದವಿಯ ಒಟ್ಟು ಸೆಮಿಸ್ಟರ್‌ಗಳ 80 ಕ್ರೆಡಿಟ್‍ಗಳಲ್ಲಿ 7.71 ಸಿಜಿಪಿಎ ಗಳಿಸಿರುವರು. ಮಂಗಳೂರು ವಿವಿಯ 37 ನೆಯ ವಾರ್ಷಿಕ ಘಟಿಕೋತ್ಸವದಲ್ಲಿ ಇವರು ‘ಗಿರೀಶಮ್’ ಚಿನ್ನದ ಪದಕ, ಲೋಬೊ ಪ್ರಭು ಎಸ್ ಆರ್ ಆಲ್ಫೋನ್ಸೊ ಬಹುಮಾನ ಮತ್ತು ಪಿವಿಎಸ್ ಮೆಮೋರಿಯಲ್ ನಗದು ಬಹುಮಾನವನ್ನು ಪಡೆಯಲು ಅರ್ಹತೆಯನ್ನು ಗಳಿಸಿರುತ್ತಾರೆ.
ಈ ಸನ್ಮಾನದ ಸಂದರ್ಭದಲ್ಲಿ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ, ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ, ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕ ದಿನಕರ ರಾವ್, ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ನಿವಾಸಿ ಹಾಗೂ ರ್ಯಾಂಕು ವಿಜೇತೆಯ ಹೆತ್ತವರಾದ ಅರುಣಾ ಮತ್ತು ನಾರಾಯಣ ನಾಯ್ಕ, ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದನ್ ಕುಮಾರ್, ಕಾರ್ಯದರ್ಶಿ ಮಹಮ್ಮದ್ ಅಫೀಸ್, ಜೊತೆ ಕಾರ್ಯದರ್ಶಿ ವಿಯೋಲಿನ್ ಲುಸಿಟ್ಟಾ ಡಿ’ಸೋಜ ಉಪಸ್ಥಿತರಿದ್ದರು.















