
ಮಂಗಳೂರು: ಲಾರಿಯಲ್ಲಿ ಎಣ್ಣೆ ಸಾಗಾಟ ಮಾಡುತ್ತಿದ್ದ ವೇಳೆ, ಎಣ್ಣೆ ರಸ್ತೆಯಲ್ಲಿ ಚೆಲ್ಲಿ ಬೈಕ್ ಸವಾರರೊನೊಬ್ಬ ಬಿದ್ದು ಗಾಯಗೊಂಡಿದ್ದ. ಇದನ್ನು ಕಂಡು ಪೊಲೀಸರು ಎಣ್ಣೆ ಚೆಲ್ಲಿದ ಕಡೆಗಳಿಗೆ ಮಣ್ಣು ಹಾಕಿ ಎಣ್ಣೆ ಬಿದ್ದ ಸ್ಥಳವನ್ನು ಮುಚ್ಚಿ ಸಮಯಪ್ರಜ್ಞೆ ಮೆರೆದ ಘಟನೆ ನಗರದ ಲಾಲ್‍ಬಾಗ್ ಸಮೀಪ ನಡೆದಿದೆ.

ಲಾಲ್‍ಬಾಗ್ ಜಂಕ್ಷನ್‍ನಲ್ಲಿ ಎಣ್ಣೆ ಬಿದ್ದಿರುವುದರ ಬಗ್ಗೆ ಟ್ರಾಫಿಕ್ ಪೊಲೀಸ್ ಮಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಲಾಗಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಬರದಿರುವುದನ್ನು ಕಂಡು ಟ್ರಾಫಿಕ್ ಪೊಲೀಸರಾದ ಶ್ರೀಕಾಂತ್, ಬಂದೇ ನವಾಜ್ ಹಾಗೂ ಎಎಸ್‍ಐ ಸುರೇಶ್ ತಾವೇ ಮಣ್ಣು ಹಾಕಿ ಎಣ್ಣೆ ಬಿದ್ದಿರುವ ಜಾಗವನ್ನು ಮುಚ್ಚಿ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.























