
ಸುಬ್ರಹ್ಮಣ್ಯ : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಗ್ರಾಮ ಸಮಿತಿ ಸುಬ್ರಹ್ಮಣ್ಯ ಇದರ ನೂತನ ಸಮಿತಿ ರಚನೆ ಗುರುವಾರ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ್ ಆಚಾರ್ಯ ಅವರನ್ನು ನೇಮಕ ಮಾಡಲಾಯಿತು. ನೂತನ ಅಧ್ಯಕ್ಷರ ನೇಮಕಾತಿಯನ್ನು ವಿಶ್ವ ಹಿಂದು ಜಿಲ್ಲಾ ಅಧ್ಯಕ್ಷ ಪ್ರಸನ್ನ ಭಟ್ ನೆರವೇರಿಸಿದರು .

ಕಾರ್ಯದರ್ಶಿಯಾಗಿ ಶ್ರೀಕುಮಾರ್, ಸತ್ಸಂಗ ಪ್ರಮುಖ್ ಶಿವಾನಂದ ಕಿಣಿ, ಮಾತೃ ಪ್ರಮುಖ ಹರಿಣಾಕ್ಷಿ, ಸಂಯೋಜಕ ದಿವಿನ್ ಭಟ್, ಸಹ ಸಂಯೋಜಕ ಅಶ್ವತ್ಥ್ ಬಿಳಿನೆಲೆ ಮತ್ತು ಅಜಯ್, ಗೋರಕ್ಷಾ ಪ್ರಮುಖ್ ಚರಣ್ ಅರುಗುಡಿ, ಸುರಕ್ಷಾ ಪ್ರಮುಖ್ ಬಾಲಕೃಷ್ಣ ಕೈಕಂಬ, ಅಖಾಡ ಪ್ರಮುಖ್ ರಾಧಾಕೃಷ್ಣ, ಸಾಪ್ತಾಹಿಕ ಮಿಲನ್ ಜೀವನ, ವಿದ್ಯಾರ್ಥಿ ಪ್ರಮುಖ ರಜನೀಶ್, ಇವರುಗಳನ್ನು ಆಯ್ಕೆ ಮಾಡಲಾಯಿತು .
ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶ್ವ ಹಿಂದೂ ಜಿಲ್ಲಾ ಅಧ್ಯಕ್ಷ ಡಾ:ಪ್ರಸನ್ನ ಪುತ್ತೂರು, ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿಎಸ್, ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಮಂಗಳೂರು ಜಿಲ್ಲಾ ಅಧ್ಯಕ್ಷ ಗೋಪಾಲ್ ಕುತ್ತಾರ್, ಪುತ್ತೂರು ಜಿಲ್ಲಾ ಬಜರಂಗದಳ ಸಹಸಂಯೋಜಕ್ ಲತೀಶ್ ಗುಂಡ್ಯ ಸುಳ್ಯ ಪ್ರಖಂಡ ಸಂಚಾಲಕ ಪ್ರಸಾದ್ ರೈ ಹಾಗೂ ಜಿಲ್ಲೆಯ ಪ್ರಮುಖರು ಹಾಗೂ ಸುಳ್ಯ ತಾಲೂಕಿನ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು .















