
ಪಂಜ ಕ್ಷೇತ್ರದ ತಾ. ಪಂ. ಮಾಜಿ ಸದಸ್ಯ ಮೋನಪ್ಪ ಪೂಜಾರಿ ಯವರು ಎ. 4 ಗುರುವಾರದಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇತೀಚೆಗೆ ತೀರಾ ಅಸೌಖ್ಯದಿಂದ ಬಳಳಲುತಿದ್ದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದು ಫಲಕಾರಿಯಾಗದೆ ಹೆಚ್ಚಿನ ಚಿಕಿತ್ಸಗೆ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶ ರಾಗಿದ್ದಾರೆ. .
ಪತ್ನಿ, ಪುತ್ರ ಹಾಗು ಪುತ್ರಿಯನ್ನು ಅಗಲಿದ್ದಾರೆ.
ಮೋನಪ್ಪ ಪೂಜಾರಿಯವರು ಬಿಜೆಪಿ ನಾಯಕರಾಗಿ ಗುರುತಿಸಿಕೊಂಡಿದ್ದರು.
ಹಾಗು ಸ್ಥಳೀಯವಾಗಿ ಗುತ್ತಿಗೆದಾರರಾಗಿ ಹೆಸರು ಪಡೆದಿದ್ದರು.
ವರದಿ : ಶಿವ ಭಟ್, ಕಹಳೆ ನ್ಯೂಸ್ ಸುಬ್ರಹ್ಮಣ್ಯ















