
ದೇಶ ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಇದ್ದು, ಇದೇ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಗೃಹ ಹಾಗೂ ವಾಹನ ಸಾಲ ಪಡೆಯುವವರಿಗೆ ಸಿಹಿ ಸುದ್ದಿ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿಯ ದ್ವೈ ಮಾಸಿಕ ಸಭೆ ಇಂದು ನಡೆದಿದ್ದು ರೆಪೋ ದರವನ್ನು ಶೇಕಡ 6.25 ರಿಂದ ಶೇಕಡ 6ಕ್ಕೆ ಇಳಿಕೆ ಮಾಡಲಾಗಿದೆ.
ಇದರ ಪರಿಣಾಮ ಗೃಹಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದ್ದು, ಸ್ವಂತ ಸೂರು ಹೊಂದುವ ಕನಸು ಕಾಣುತ್ತಿರುವವರಿಗೆ ಅನುಕೂಲವಾಗಲಿದೆ.
ಹೊಸ ಹಣಕಾಸು ವರ್ಷದಲ್ಲಿ ಭಾರತೀಯ ರಿಸರ್ವ ಬ್ಯಾಂಕ್ ಪ್ರಮುಖ ಬಡ್ಡಿ ದರಗಳಲ್ಲಿ ಶೇ.0.25ರಷ್ಟು ಕಡಿತಗೊಳಿಸಿದೆ.
2017-18ರಲ್ಲಿ ಶೇ.6.6 ರಷ್ಟು ಇದ್ದ ಜಿಡಿಪಿ ಬೆಳವಣಿಗೆಯನ್ನು ಆರ್ ಬಿಐ 2018-19ರ ಹಣಕಾಸು ವರ್ಷಕ್ಕೆ ಶೇ.7.4 ಮಟ್ಟಕ್ಕೆ ಏರುವುದು ಎಂದು ಅಂದಾಜು ಮಾಡಿದೆ.
ಹಣದುಬ್ಬರ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಆರ್ ಬಿಐ ಎರಡನೇ ಸಲ ಶೇ.0.25ರಷ್ಟು ಬಡ್ಡಿ ದರವನ್ನು ಕಡಿತ ಮಾಡಿದೆ.













