ಪ್ರಧಾನಿ ಮೋದಿಯವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅತ್ಯುನ್ನತ ನಾಗರಿಕ ಗೌರವ ಝಯೇದ್ ಪ್ರಶಸ್ತಿ – ಕಹಳೆ ನ್ಯೂಸ್

ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅತ್ಯುನ್ನತ ನಾಗರಿಕ ಗೌರವ ಝಯೇದ್ ಪ್ರಶಸ್ತಿಯನ್ನು ಘೋಷಿಸಿದೆ.
ಉಭಯ ರಾಷ್ಟ್ರಗಳ ನಡುವಿನ ಸೌಹಾರ್ದತೆಗೆ ಶ್ರಮಿಸಿದ್ದಕ್ಕಾಗಿ ನರೇಂದ್ರ ಮೋದಿಯವರಿಗೆ ಈ ಪ್ರಶಸ್ತಿ ಘೋಷಿಸಲಾಗಿದೆ. ಮೋದಿಯವರಿಗೆ ಪ್ರಶಸ್ತಿ ಘೋಷಿಸಿದ ವಿಚಾರವನ್ನು ದೊರೆ ಮೊಹಮ್ಮದ್ ಬಿನ್ ಜಯೇದ್ ಅಲ್ ನೆಹ್ಯಾನ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನೆರೆಹೊರೆಯ ರಾಷ್ಟ್ರಗಳೊಂದಿಗೆ ಶಾಂತಿ-ಸೌಹಾರ್ದತೆ ಕಾಪಾಡಿಕೊಳ್ಳುವ ಸಲುವಾಗಿ ಬಹುವಾಗಿ ಪ್ರಯತ್ನ ನಡೆಸಿದ್ದಾರೆ.













