Recent Posts

Sunday, September 13, 2026
ಸುದ್ದಿ

ಮತದಾನದ ಮಹತ್ವ ಸಾರಲು ಜಾಗೃತಿ ಕಾರ್ಯಕ್ರಮ – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯು ಅತ್ಯಧಿಕ ಶೇಕಡ ಮತದಾನವಾಗಬೇಕೆಂದು ಜಿಲ್ಲಾಡಳಿತ ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜನರಿಗೆ ಮತದಾನದ ಮಹತ್ವ ಸಾರುಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯ ಸ್ವೀಪ್ ಸಮಿತಿ ಸಜ್ಜಾಗಿದೆ.

ಜಾಹೀರಾತು

ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಓ ಸೆಲ್ವಮಣಿ ಮಾಹಿತಿ ನೀಡಿದ್ದು ಈ ಬಾರಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಸ್ವೀಪ್ ಸಮಿತಿವತಿಯಿಂದ ಗಾಳಿಪಟ ಉತ್ಸವ, ಮರಳು ಶಿಲ್ಪ, ಹದಿನೆಂಟು ಕಿಲೋಮೀಟರಿನ ವಾಕಥನ್, ಸೈಕ್ಲೋಥಾನ್ ನಡೆಸಿ ಮತದಾನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಗರದ ಮಾಲ್‍ಗಳಲ್ಲಿ ಡೆಮೋ ಮತಚಲಾವಣೆ ಮಾಡಿಸುವ ಯೋಜನೆಯಿದ್ದು ಈಗಾಗಲೆ ಜಿಲ್ಲೆಯ ವಿವಿಧೆಡೆ ಎರಡು ಲಕ್ಷ ಮಂದಿಗೆ ಮತದಾನ ಚಲಾವಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ ಎಂದು ತಿಳಿಸಿದರು. ಈ ಬಾರಿ ಪಿಂಕ್ ಬೂತ್, ಎತ್ನಿಕ್ ಬೂತ್, ಟ್ರೈಬಲ್ ಪ್ರೆಂಡ್ ಬೂತ್ ಜೊತೆಗೆ ಸೀನಿಯರ್ ಸಿಟಿಜನ್ ಪ್ರೆಂಡ್ಲಿ ಬೂತ್ ತೆರೆಯಲು ಯೋಜನೆ ಸಿದ್ದ ಪಡಿಸಲಾಗಿದೆ ಎಂದು ತಿಳಿಸಿದರು.