Tuesday, March 17, 2026
ಸುದ್ದಿ

ಮಂಗಳೂರಿನಲ್ಲಿ ಟ್ಯೂಷನ್‌ಗೆ ತೆರೆಳಿದ ಇಬ್ಬರು ಮಕ್ಕಳು ನಾಪತ್ತೆ – ಕಹಳೆ ನ್ಯೂಸ್

ಮಂಗಳೂರು: ನಿನ್ನೆ ಟ್ಯೂಷನ್ ಕ್ಲಾಸ್‌ಗೆಂದು ತೆರಳಿದ್ದ ಮಂಗಳೂರು ಸುರತ್ಕಲ್ ಪ್ರದೇಶದ ಕೃಷ್ಣಾಪುರ 6 ಬ್ಲಾಕ್‌ನ ಇಬ್ಬರು ಬಾಲಕರು ನಾಪತ್ತೆಯಾಗಿದ್ದಾರೆ.

ತನ್ವೀರ್ ಹಾಗೂ ತನ್ವೀಝ್ ಎಂಬ ಇಬ್ಬರು ಬಾಲಕರು ಪ್ರತಿದಿನ ಟ್ಯೂಷನ್ ಕ್ಲಾಸ್‌ಗೆ ತೆರಳಿ ಅಲ್ಲಿಂದ ಮದ್ರಸಾಕ್ಕೆ ಹೋಗಿ ರಾತ್ರಿ 9 ರ ಸುಮಾರಿಗೆ ಮನೆಗೆ ಬರುತ್ತಿದ್ದರು. ಆದರೆ ನಿನ್ನೆ ಮದ್ರಸಾಕ್ಕೆ ರಜೆ ಇದ್ದರೂ, ರಾತ್ರಿ ಟ್ಯೂಷನ್‌ನ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಸಂಜೆಯ ವೇಳೆ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಇದ್ದುದ್ದಾಗಿ ಮಾಹಿತಿ ಬಂದಿವೆಯಾದರೂ ಅಲ್ಲಿಂದ ಯಾವ ಪ್ರದೇಶಕ್ಕೆ ತೆರಳಿದ್ದಾರೆಂಬ ನಿಖರ ಮಾಹಿತಿ ಇಲ್ಲ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.