Thursday, March 12, 2026
ಸುದ್ದಿ

ಪ್ರಧಾನಿ ಮೋದಿ ಮನವಿಗೆ ಜಯ: ಸೌದಿ ಜೈಲಿಂದ 850 ಕೈದಿಗಳ ಬಿಡುಗಡೆ – ಕಹಳೆ ನ್ಯೂಸ್

ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿ ಮಾಡಬೇಕು ಎಂಬ ಭಾರತದ ಉದ್ದೇಶ ಇದೀಗ ಇಡೇರುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆದ ನಂತರ ಸೌದಿಯ ರಾಜ ಮೊಹ್ಮದ್ ಬಿನ್ ಸಲ್ಮಾನ್‌ಗೆ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ, ಬಳಿಕ ಮಾತನಾಡಿದ ಸಲ್ಮಾನ್, ಭಾರತ-ಸೌದಿ ಐತಿಹಾಸಿಕ ಸಂಬಂಧ ಹೊಂದಿದ್ದು, ಇದನ್ನು ಇನ್ನಷ್ಟು ಬಲಗೊಳಿಸುವ ಆಶಯ ವ್ಯಕ್ತಪಡಿಸಿದರು.

ಸೌದಿಯ ರಾಜ ಮೊಹ್ಮದ್ ಬಿನ್ ಸಲ್ಮಾನ್ ಅವರು ತಮ್ಮ ದೇಶದ ಜೈಲುಗಳಲ್ಲಿರುವ ಭಾರತದ 850 ಕೈದಿಗಳ ಬಿಡುಗಡೆಗೆ ಆದೇಶ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯನ್ನು ಪುರಸ್ಕರಿಸಿ, ಈ ಆದೇಶವನ್ನು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ ಮೇರೆಗೆ ಸೌದಿ ಅರೇಬಿಯಾದ ರಾಜ ಸೌದಿಯ ಜೈಲುಗಳಲ್ಲಿ ಇರುವ 850 ಭಾರತೀಯರ ಬಿಡುಗಡೆ ಆದೇಶಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು

ಭಾರತೀಯ ಕೈದಿಗಳ ಬಿಡುಗಡೆ ಜತೆಗೆ ಭಾರತದಿಂದ ಹಜ್ ಯಾತ್ರೆಗೆ ತೆರುಳುವ ಕೋಟ್ ಅನ್ನು ಎರಡು ಲಕ್ಷಕ್ಕೆ ಏರಿಸುವುದಾಗಿ ಕೂಡ ತಿಳಿಸಿದ್ದಾರೆ.

‘ಭಾರತ ಹಾಗೂ ಸೌದಿ ನಡುವಿನ ಸಂಬಂಧವು ನಮ್ಮ ಡಿಎನ್‌ಎನಲ್ಲೇ ಇದೆ. ಇದು ಇನ್ನಷ್ಟು ವಿಸ್ತರಿಸಬೇಕು. ಸೌದಿ ಅರೇಬಿಯಾದ ಅಭಿವೃದ್ಧಿಯ ಪಾಲುದಾರರಾಗಿರುವ ಲಕ್ಷಾಂತರ ಭಾರತೀಯರಿಗೆ ಧನ್ಯವಾದ’ ಎಂದು ಅವರು ಹೇಳಿದರು.