
ನೋ…ಚಾನ್ಸ್…ಸಂಧಾನದ ಮಾತೇ ಇಲ್ಲ ಇದು ಕಂಪ್ಲಿ ಶಾಸಕ ಗಣೇಶ್ ರಿಂದ ಹಲ್ಲೆಗೊಳಗಾಗಿರುವ ಆನಂದ್ ಸಿಂಗ್ ಅವರು ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆ.
ನಿನ್ನೆ ಅಪೋಲೋ ಆಸ್ಪತ್ರೆಯಿಂದ ನಾರಾಯಣ ನೇತ್ರಾಲಯಕ್ಕೆ ಹೋಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ಸದ್ಯ ನಾನು ಚೇತರಿಸಿಕೊಳ್ಳುತ್ತಿದ್ದು, ನಾನು ಇನ್ನು ಪೂರ್ತಿಯಾಗಿ ಚೇತರಿಸಿಕೊಳ್ಳಲು ಇನ್ನು 15-20 ದಿನ ಬೇಕಾಗಬಹುದು ಅಂತ ಹೇಳಿದರು.
ಇನ್ನು ಹಲ್ಲೆಗೆ ಸಂಬಂಧಪಟ್ಟಂತೆ ಗಣೇಶ್ ವಿರುದ್ದ, ಕಾನೂನು ಪ್ರಕಾರ ಕೈಗೊಳ್ಳಲಿ. ಸಂಧಾನದ ಚಾನ್ಸೇ ಇಲ್ಲ ಎಂದು ಸ್ಪಷ್ಟಪಡಿಸಿದರು.














