
ಇತ್ತೀಚೆಗೆ ನಿಧನರಾದ ರಾಜಕೀಯ ಧುರೀಣ, ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರ ಪಾರ್ಥಿವ ಶರೀರ ಇಂದು ಅವರ ಮಾತೃ ಬಿಜೈ ಚರ್ಚ್‍ನಲ್ಲಿ ದಫನ ಮಾಡಲಾಗುವುದು.
ದೆಹಲಿಯಿಂದ ತರುವ ಈ ಪಾರ್ಥಿವ ಶರೀರವನ್ನು ಇಂದು 3.30 ಕ್ಕೆ ಜಾರ್ಜ್ ಫರ್ನಾಂಡಿಸ್ ಅವರ ಮಾತೃ ಬಿಜೈ ಚರ್ಚ್‍ನಲ್ಲಿ ಪ್ರಾರ್ಥನಾ ವಿಧಿಗಳೊಂದಿಗೆ ಸಮಾಧಿ ಮಾಡಲಾಗುವುದು ಎಂದು ಚರ್ಚ್‍ನ ಪ್ರಧಾನ ಧರ್ಮಗುರು ವಂ.ಫಾ.ವಿಲ್ಸನ್ ವೈಟಸ್ ಡಿಸೋಜ ತಿಳಿಸಿದ್ದಾರೆ.














