Monday, March 16, 2026
ಸುದ್ದಿ

ಮಾಧ್ಯಮಗಳಿಗೆ ನಮ್ಮನ್ನು ಬೇರೆ ಪಕ್ಷಗಳಿಗೆ ಸೇರಿಸುವ ಆಸೆ: ಶಿವರಾಮ ಹೆಬ್ಬಾರ್ – ಕಹಳೆ ನ್ಯೂಸ್

ಶಿರಸಿ: ಮಾಧ್ಯಮಗಳಿಗೆ ನಮ್ಮನ್ನು ಬೇರೆ ಪಕ್ಷಗಳಿಗೆ ಸೇರಿಸುವ ಆಸೆಯೇ ಹೊರತು ನಮಗೆ ಮಾತ್ರ ಪಕ್ಷ ಬಿಡುವ ಆಸೆಯಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ತಾಲೂಕಿನ ಬನವಾಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರೆಸಾರ್ಟ್ನಲ್ಲಿ ಲೋಕಸಭೆ ಚುನಾವಣೆಯ ಕುರಿತು ಚರ್ಚೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ರಾಜ್ಯದ 28 ಲೋಕಸಭೆ ಕ್ಷೇತ್ರಕ್ಕೆ ಯಾವ ಶಾಸಕರನ್ನು ಉಸ್ತುವಾರಿಯಾಗಿ ನೇಮಕ ಮಾಡಬೇಕು ಎನ್ನುವ ಚರ್ಚೆ ನಡೆಸಿದ್ದೇವೆ ಎಂದರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭೇಟಿ ಕುರಿತು ಸ್ಪಷ್ಟನೆ ನೀಡಿದ ಅವರು, ಯಲ್ಲಾಪುರಕ್ಕೆ ಅವರು ಪ್ರೋಟೋಕಾಲ್ ಪ್ರಕಾರ ಭೇಟಿಯಾಗಿದ್ದೇನೆ.

ಎಲ್ಲರಿಗೂ ಗೌರವ ನೀಡಬೇಕು. ಅವರು ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದಾಗ ಸೌಹಾರ್ದಯುತ ಭೇಟಿ ಮಾಡಿದ್ದೇನೆ. ಅಲ್ಲದೇ ಇಂದು ಅಂಕೋಲಾದಲ್ಲಿ ನಡೆಯಲಿರುವ ಪಾಸ್‌ಪೋರ್ಟ್ ಕೇಂದ್ರ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನೂ ಸಹ ಅಲ್ಲಿ ನೀಡಿದ್ದಾರೆ ಎಂದರು.