Saturday, March 14, 2026
ಸುದ್ದಿ

ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾಯಿಸಿದ ಸೇನಾ ಉಪಗ್ರಹ ಮೈಕ್ರೋಸ್ಯಾಟ್-ಆರ್‌ – ಕಹಳೆ ನ್ಯೂಸ್

ಶ್ರೀಹರಿಕೋಟಾ: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೇನಾ ಉಪಗ್ರಹ ಮೈಕ್ರೋಸ್ಯಾಟ್-ಆರ್‌ನ್ನು ನಿನ್ನೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಇಸ್ರೊದ 44 ಮೀಟರ್ ಉದ್ದದ ‘ಪಿಎಸ್‌ಎಸ್‌ವಿ- ಸಿ೪೪’ ಉಡಾವಣಾ ವಾಹಕ ನಿನ್ನೆ ರಾತ್ರಿ 11.37 ಕ್ಕೆ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು. ‘ಮೈಕ್ರೋಸ್ಯಾಟ್-ಆರ್’ 240 ಕೆ.ಜಿ. ತೂಕವಿರುವ ಈ ಉಪಗ್ರಹ ಸೇನೆಗಾಗಿಯೇ ಬಳಸಲು ಉದ್ದೇಶಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇಸ್ರೊ ಈ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ. ಮೈಕ್ರೋಸ್ಯಾಟ್-ಆರ್’ ಜತೆಯಲ್ಲಿ ‘ಕಲಾಂಸ್ಯಾಟ್’ ಉಪಗ್ರಹವನ್ನು ಸಹ ಉಡಾಯಿಸಲಾಗಿತ್ತು.

ಜಾಹೀರಾತು
ಜಾಹೀರಾತು

12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಉಪಗ್ರಹವನ್ನು ನ್ಯಾನೊ ಉಪಗ್ರಹಗಳ ಸಂಪರ್ಕ ವ್ಯವಸ್ಥೆಯ ಅಧ್ಯಯನಕ್ಕೆ ಪ್ರಾಯೋಗಿಕವಾಗಿ ಬಳಸಲು ಉದ್ದೇಶಿಸಲಾಗಿದೆ.

ಈ ಉಪಗ್ರಹದಿಂದ ವಿಪತ್ತು ನಿರ್ವಹಣೆ ಸಹಕಾರಿಯಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.