Friday, March 13, 2026
ಸುದ್ದಿ

ಯಶಸ್ವಿಯಾಗಿ ಉಡಾವಣೆಗೊಂಡ ಕಲಾಂಸ್ಯಾಟ್ ವಿ2 – ಕಹಳೆ ನ್ಯೂಸ್

ಭಾರತೀಯ ಬಾಹ್ಯಾಕಾಶ ಸಂಸ್ಥೆ ಹಲವಾರು ಉಪಗ್ರಹಗಳನ್ನು ಉಡಾವಣೆ ಮಾಡಿ ತನ್ನ ಕೀರ್ತಿಯನ್ನು ದೇಶ ವಿದೇಶದೆಲ್ಲೆಡೆ ಪಸರಿಸಿದೆ, ಇದೀಗ ಮತ್ತೊಂದು ಹೆಮ್ಮೆಯ ಕಿರೀಟ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಪಾಲಾಗಿದೆ.

ಹೌದು ಕೇವಲ 12 ಲಕ್ಷ ರೂ ವೆಚ್ಚದಲ್ಲಿ, ಆರೇ ದಿನಗಳಲ್ಲಿ ಕಲಾಂಸ್ಯಾಟ್ ವಿ2 ನಿರ್ಮಿಸಲಾದ ಈ ಉಪಗ್ರಹವನ್ನು ಆಂಧ್ರಪ್ರದೇಶ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಪಗ್ರಹ ಉಡಾವಣೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಸ್ಪೇಸ್ ಕಿಡ್ಸ್ ಇಂಡಿಯಾ ಎಂಬ ಖಾಸಗಿ ಸಂಘಟನೆಯ ವಿದ್ಯಾರ್ಥಿಗಳು ಈ ಉಪಗ್ರಹವನ್ನು ನಿರ್ಮಿಸಿದ್ದು,ಇದು ಕೇವಲ 1.26 ಕೆ ಜಿ ತೂಕವಿದೆ. ಭಾರತದ ಅತ್ಯಂತ ಹಗುರದ ಉಪಗ್ರಹ ಎಂಬ ಖ್ಯಾತಿಗೂ ಇದು ಪಾತ್ರವಾಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಉಡಾವಣಾ ವಾಹನ- ಸಿ 44 ಅನ್ನು (ಪಿಎಸ್‌ಎಲ್ ವಿ-ಅ44) ಮಾಡಿ, ಅದರಲ್ಲಿ ಕಲಾಂಸ್ಯಾಟ್ ಕೃತಕ ಉಪಗ್ರಹ (ಫೆಸ್ಟೊ) ಮತ್ತು ಮೈಕ್ರೊಸ್ಯಾಟ್-ಆರ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ರವಾನಿಸಲಾಗಿದೆ.