
ಮಂಗಳೂರು: ನಗರದ ಪದವು ಗ್ರಾಮದ ಕುಲಶೇಖರ ಎಂಬಲ್ಲಿ ರಸ್ತೆಬದಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪದವು ಗ್ರಾಮದ ಕುಲಶೇಖರದ ಕಕ್ಕೆಬೆಟ್ಟು ಮನೆಯ ಜಿತಿನ್, ನೀರುಮಾರ್ಗದ ಅಡ್ಯಾರ್ ಪದವು ಪ್ರಕೃತಿ ಲೇಔಟ್‌ನ ಮೋಹಿತ್ ಕುಮಾರ್, ಮತ್ತು ವಾಮಂಜೂರು ಮೂಡುಶೆಡ್ಡೆಯ ಶಿವನಗರ ಗುರುರಾಜ್ ಬಂಧಿತ ಆರೋಪಿಗಳು.
ರಸ್ತೆ ಬದಿಯಲ್ಲಿ ಗಾಂಜಾ ಸೇವನೆ ಮಾಡುತ್ತಿರುವ ಸಂದರ್ಭ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಎನ್‌ಡಿಪಿಎಸ್ ಕಾಯ್ದೆಯಡಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿಕೊಳ್ಳಲಾಗಿದೆ.














