Saturday, March 14, 2026
ಸುದ್ದಿ

ಲಾರಿ ಪಲ್ಟಿ: ಮೂವರು ಗಾಯ, ಓರ್ವನ ಸ್ಥಿತಿ ಗಂಭೀರ – ಕಹಳೆ ನ್ಯೂಸ್

ಮೂಡಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಮಾರು ಬಾಂದೊಟ್ಟು ಎಂಬಲ್ಲಿ ಜಲ್ಲಿ ಕ್ರಶರ್ ಲಾರಿಯೊಂದು ಪಲ್ಟಿಯಾದ ಪರಿಣಾಮ ಮೂವರು ಗಾಯಗೊಂಡ ಘಟನೆ ವರದಿಯಾಗಿದೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಕೇಮಾರು ಬಾಂದೊಟ್ಟು ಕಿರು ಸೇತುವೆ ಕಾಮಗಾರಿಗಾಗಿ ಬರುತ್ತಿದ್ದ ಕ್ರಶರ್ ಲಾರಿ ಇಳಿಜಾರು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಗೆ ಉರುಳಿಬಿದ್ದಿದೆ. ಇದರಿಂದ ಲಾರಿಯ ಮುಂಭಾಗ ಬಹುತೇಕ ಜಖಂಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭ ಲಾರಿಯಡಿ ಸಿಲುಕಿದ್ದ ಚಾಲಕ ಹನುಮಂತ ಗದಗ, ಕಾರ್ಮಿಕರಾದ ಜಾರ್ಖಂಡ್ ನ ಜವಹಾರಲಾಲ್ ಹಾಗೂ ಸೈಫುದ್ದೀನ್ ಎಂಬವರನ್ನು ರಕ್ಷಿಸಲಾಗಿದೆ.

ಜಾಹೀರಾತು
ಜಾಹೀರಾತು

ಈ ಪೈಕಿ ಸೈಫುದ್ದೀನ್ ಸ್ಥಿತಿ ಗಂಭೀರವಾಗಿದ್ದು, ಉಳಿದಿಬ್ಬರಿಗೂ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.