
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಸದ್ಯಾ ‘ನಟಸಾರ್ವಭೌಮ’ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ದಿನಾಂಕ ನಿಗಧಿ ಮಾಡಿದೆ. ಇವೆಲ್ಲದರ ಬೆನ್ನಲ್ಲೇ ನಟ ಪುನೀತ್ ರಾಜ್ ಕುಮಾರ್ ಶ್ರೀರಾಯರ ಸನ್ನಿಧಿಗೆ ಭೇಟಿ ನೀಡಿದ್ದಾರೆ.
ರಾಜ್ ಕುಮಾರ್ ಕುಟುಂಬಕ್ಕೂ ರಾಯರ ಸನ್ನಿಧಿಗೂ ಹಲವಾರು ವರ್ಷಗಳ ಸಂಬಂಧವಿದೆ. ಈ ಹಿನ್ನಲೆಯಲ್ಲಿ ಇಡೀ ಕುಟುಂಬದ ಮಂದಿ ಸಮಯ ಸಿಕ್ಕಾಗಲೆಲ್ಲಾ ರಾಯರ ಭೇಟಿ ಮಾಡಿ ಬರ್ತಾರೆ.
ಇತ್ತೀಚೆಗೆ ರಾಘವೇಂದ್ರ ರಾಜ್ ಕುಮಾರ್ ದೇವಸ್ಥಾನಗಳಿಗೆ ಹೋಗಿ ಬಂದಿದ್ದರು. ಇದೀಗ ನಟ ಪುನೀತ್ ರಾಜ್ ಕುಮಾರ್ ಪತ್ನಿ ಸಮೇತ ರಾಯರ ದರ್ಶನ ಮಾಡಿದ್ದಾರೆ.
ಇಂದು ಬೆಳಗ್ಗೆ ಮಂತ್ರಾಯಲಕ್ಕೆ ಭೇಟಿ ನೀಡಿದ ಈ ದಂಪತಿ ರಾಘವೇಂದ್ರ ಮಠಕ್ಕೆ ಹೋಗಿ ರಾಯರ ಆಶೀರ್ವಾದ ಪಡೆದಿದ್ದಾರೆ. ಇನ್ನು ರಾಯರ ದರ್ಶನ ನಂತರ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿದ್ದಾರೆ.
ಇದೇ ವೇಳೆ ಶಾಲು ಹೊದಿಸಿ ನಟ ಪುನೀತ್ ರಾಜ್‌ಕುಮಾರ್‌ರನ್ನು ಸನ್ಮಾನಿಸಿದ್ದಾರೆ. ಇನ್ನು ಇದೇ ವೇಳೆ ನೆಚ್ಚಿನ ನಟನನ್ನು ಕಂಡು ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.














