Friday, March 13, 2026
ಸುದ್ದಿ

ಜ. 25 ರಂದು ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ – ಕಹಳೆ ನ್ಯೂಸ್

ಜನವರಿ 25 ರಂದು ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆಯಲ್ಲಿದ್ದು ಬಿಜೆಪಿ ಅಧಿಕೃತ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ.

ಈಗಾಗಲೇ ಬಂಡಾಯ ಸ್ಪರ್ದೆ ಮಾಡಿರುವ ಅಭ್ಯರ್ಥಿಗಳಲ್ಲಿ ಇಬ್ಬರು ಮತ್ತೆ ನಮ್ಮ ಪಕ್ಷದಲ್ಲಿ ಸೇರಿದ್ದಾರೆ, ನಮ್ಮ ಈವರೆಗಿನ ಕಾರ್ಯ ವೈಖರಿ ನೋಡಿ ಮೆಚ್ಚಿ ಬಹುಶಃ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಹುಷ ನಮಗೆ ಎದುರಾಗಿ ಸ್ಪರ್ದಿಸಬಲ್ಲ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಎಂದು ಸುಳ್ಯ ಬಿಜೆಪಿ ಮಂಡಾಲಾಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ಜಾಹೀರಾತು
ಜಾಹೀರಾತು

ಅಲ್ಲದೇ ಈಗಾಗಲೇ 13 ಸ್ಥಾನ ಗಳಿಗೆ, ಅವಿರೋಧವಾಗಿ ಹರಿಣಿ ಸದಾನಂದ ಕೆ ಸಿ, ಸುಮತಿ ರೈ, ದಾಮೋದರ ಮಂಚಿ, ಸಾಲಗಾರರಲ್ಲದ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಎಸ್ ಅಂಗಾರ,ಜಿ.ಪಂ ಹರೀಶ್ ಕಂಜಿಪಿಲಿ, ಎ ವಿ ತೀರ್ಥರಾಮ, ಎ ಪಿ ಎಂ ಸಿ ಅಧ್ಯಕ್ಷ ಅಡ್ಯಂತಡ್ಕ ದೇರಣ್ಣ ಗೌಡ,ತಾ ಪಂ ಅಧ್ಯಕ್ಷ ಚನಿಯ ಕಲ್ತಡ್ಕ ಮೊದಲಾದವರಿದ್ದರು.