Thursday, March 12, 2026
ಸುದ್ದಿ

ಅಂಜನಾದ್ರಿ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಸುಳ್ಯ: ಶ್ರೀ ಪ್ರಸನ್ನಾಂಜನೇಯ ಸ್ವಾಮಿ, ಅಂಜನಾದ್ರಿ, ಅಡ್ಕಾರು ಇಲ್ಲಿ ನಡೆಯುವ ಕಾಲಾವಧಿ ಜಾತ್ರಾ ಮಹೋತ್ಸವ ಇದೇ ಫೆಬ್ರವರಿ ತಿಂಗಳಲ್ಲಿ ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಆಡಳಿತ ಧರ್ಮದರ್ಶಿ ಮಂಡಳಿ ಅಧ್ಯಕ್ಷರಾದ ಶ್ರೀ ಶಿವರಾಮ ರೈ ಕುರಿಯಗುತ್ತು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿ ಆಮಂತ್ರಣವು ಗ್ರಾಮದ ಪ್ರತೀ ಮನೆಯನ್ನೂ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದರೆ ದೇವಳಕ್ಕೆ ಬರಲು ಆಮಂತ್ರಣದ ಅವಶ್ಯಕತೆ ಇಲ್ಲ. ದೇವರ ಸೇವೆಯನ್ನು ಸ್ವ-ಇಚ್ಛೆಯಿಂದ ಸ್ವಚ್ಛ ಮನಸ್ಸಿನಿಂದ ಮಾಡಿ ಎಲ್ಲರೂ ಒಂದಾಗಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳೋಣ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾಸ್ತಾವಿಕವಾಗಿ ಶ್ರೀ ಕ್ಷೇತ್ರದ ತಂತ್ರಿಗಳಾದ ಪುರೋಹಿತ ನಾಗರಾಜ ಭಟ್ ಮಾತನಾಡಿ ಜಿಲ್ಲೆಯಲ್ಲೇ ಪ್ರಸಿದ್ಧವಾದ ಹನುಮ ನೇಮೋತ್ಸವವು ಈ ಕ್ಷೇತ್ರದಲ್ಲಿ ನಡೆಯಲಿದ್ದು, ಆದುದರಿಂದ ಎಲ್ಲಾ ಭಕ್ತವೃಂದ ಹೆಚ್ಚಿನ ಶ್ರಮವಹಿಸಿ ದೇವತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಜಾಹೀರಾತು
ಜಾಹೀರಾತು

ಸದಸ್ಯರಾದ ಶ್ರೀ ರವಿಪ್ರಸಾದ್ ನಾೈಕ್ ಕಜೆಗದ್ದೆ, ಗಣೇಶ್ ಭಟ್ ಸಂಪತ್ತಿಲ, ಖಜಾಂಜಿ ಜಯಂತ ಗೌಡ ಅಡ್ಕಾರು, ಕೃಷ್ಣಕುಮಾರ ಅಡ್ಕಾರು, ನಾರಾಯಣ ನಾಯ್ಕ ಕಜೆಗದ್ದೆ ಹಾಗೂ ಸೇವಾ ಸಮಿತಿಯಸೀತಾರಾಮ ಆಳಂಕಳ್ಯ, ವಿವೇಕ ರೈ ಡಿಂಬ್ರಿಗುತ್ತು, ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಉಪಸ್ಥಿತರಿದ್ದರು.