
ಬಂಟ್ವಾಳ: ಪರಂಗಿಪೇಟೆಯಲ್ಲಿ ರೈಲ್ವೆ ಇಲಾಖೆ ಮತ್ತು ಸ್ಥಳೀಯರ ನಡುವಿನ ವಿವಾದ ಕೊನೆಗೆ ಅಂತ್ಯ ಕಂಡಿದೆ.
ರೈಲ್ವೆ ಇಲಾಖೆ ಮತ್ತು ಸಾರ್ವಜನಿಕರ ವಿವಾದದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎ.ಸಿ.ರವಿ ಚಂದ್ರ ಹಾಗೂ ಬಂಟ್ವಾಳ ಎ.ಎಸ್.ಪಿ. ಸೈದುಲು ಅಡಾವತ್ ಅವರು ಬೇಟಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡರು.
ಪರಂಗಿಪೇಟೆ ಮೀನು ಮಾರುಕಟ್ಟೆ ಮತ್ತು ರೈಲ್ವೆ ಇಲಾಖೆಯವರ ನಡುವಿನ ಜಮೀನಿನ ವಿವಾದ ಪರಿಹಾರವಾದ ಬಳಿಕ ರೈಲು ಇಲಾಖೆಯವರು ರಸ್ತೆಯ ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪದಲ್ಲಿ ಮತ್ತೆ ಪರಂಗಿಪೇಟೆ ಪರಿಸರದಲ್ಲಿ ಗೊಂದಲ ಉಂಟಾಯಿತು.
ಹಲವಾರು ವರ್ಷಗಳಿಂದ ಮೀನು ಮಾರುಕಟ್ಟೆ ಮತ್ತುರೈಲು ಇಲಾಖೆ ಯವರ ಮಧ್ಯೆ ಜಮೀನಿನ ವಿವಾದಗಳು ನಡೆಯುತ್ತಲೆ ಇತ್ತು. ಪರಂಗಿಪೇಟೆ ಮೀನು ಮಾರುಕಟ್ಟೆಯವರು ರೈಲ್ವೆ ಇಲಾಖೆಯವರ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪವಾಗಿತ್ತು.

ಈ ಜಮೀನು ರೈಲ್ವೆ ಇಲಾಖೆಯವರಿಗೆ ಸೇರಿದ್ದಾಗಿದ್ದರಿಂದ ಮೀನು ಮಾರುಕಟ್ಟೆಯವರು ಇಲ್ಲಿಂದ ತೆರವುಗೊಳಿಸುವಂತೆ ನೋಟೀಸ್ ಜಾರಿ ಮಾಡಿದ್ದರು.
ನೋಟೀಸ್ ಜಾರಿಯಾದರೂ ಸ್ಥಳ ಬಿಟ್ಟು ಕದಲದ ಮೀನು ಮಾರುಕಟ್ಟೆಯವರನ್ನು ಬಲಾತ್ಕಾರವಾಗಿ ರೈಲ್ವೆ ಇಲಾಖೆಯವರು ಪೋಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದ ವೇಳೆ ಇಲಾಖೆ ಮತ್ತು ಮೀನು ಮಾರುಕಟ್ಟೆ ಹಾಗೂ ಸ್ಥಳೀಯ ಪಂಚಾಯತ್ ನಡುವೆ ವಾಗ್ವಾದಗಳು ನಡೆದು ಸ್ಥಳದಲ್ಲಿ ಕೆಲಹೊತ್ತು ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು.
ಕೊನೆಗೆ ಇಲಾಖೆ ಮತ್ತು ಸ್ಥಳೀಯ ಪಂಚಾಯತ್, ಎ.ಎಸ್.ಪಿ.ಹಾಗೂ ಅಪಾರ ಜಿಲ್ಲಾಧಿಕಾರಿ ನಡುವೆ ಮಾತುಕತೆ ನಡೆದು ಮೀನು ಮಾರುಕಟ್ಟೆಯವರಿಗೆ ಪ್ರತ್ಯೇಕ ಸ್ಥಳ ನೀಡುವಂತೆ ಗ್ರಾಮ ಪಂಚಾಯತ್ ಗೆ ಸೂಚಿಸಿದ ಬಳಿಕ ಅಂಗಡಿಗಳನ್ನು ತೆರವುಗೊಳಿಸಿದ್ದರು.
ಮೀನು ಮಾರಾಟಗಾರರಿಗೆ ಪಂಚಾಯತ್ ಪ್ರತ್ಯೇಕ ಜಾಗ ನೀಡಿದ ಬಳಿಕ ಈ ಜಾಗವನ್ನು ರೈಲ್ವೆ ಇಲಾಖೆಯವರು ವಶಕ್ಕೆ ತೆಗೆದುಕೊಂಡು ಬೇಲಿ ಹಾಕಲು ಇಂದು ಮುಂದಾದಾರು.

ಆದರೆ ರೈಲ್ವೆ ಇಲಾಖೆಯವರ ಸರ್ವೆ ಕಾರ್ಯ ನಡೆಸಿದ ಜಮೀನಿನ ಗುರುತು ಬಿಟ್ಟು ಹೆಚ್ಚುವರಿಯಾಗಿ ರಾಷ್ಟ್ರೀಯ ಹೆದ್ದಾರಿಯ ಜಾಗವನ್ನು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಆರೋಪ ಹೊರಿಸಿ ಇಲಾಖೆಯ ಕೆಲಸಗಾರರು ಮತ್ತು ಸ್ಥಳೀಯರ ಮದ್ಯೆ ವಾಗ್ವಾದಗಳು ನಡಯಿತು.
ಪಾದಾಚಾರಿಗಳು ನಡೆದುಕೊಂಡು ಹೋಗಲು ಸ್ಥಳಾವಕಾಶವನ್ನು ಇಲಾಖೆ ನೀಡದೆ ಜಮೀನಿನ ಒತ್ತುವರಿಯನ್ನು ಜೆಸಿಬಿ ಬಳಸಿ ಮಾಡುವುದರ ಜೊತೆಗೆ ಬೇಲಿ ಹಾಕಲು ಇಂದು ಬೆಳಿಗ್ಗೆ ಮುಂದಾಗಿತ್ತು.
ಆದರೆ ಸ್ಥಳೀಯರು ಮಧ್ಯೆ ಪ್ರವೇಶ ಮಾಡಿ ರಾಷ್ಟ್ರೀಯ ಹೆದ್ದಾರಿಯ ಜಾಗವನ್ನು ಅತಿಕ್ರಮಣ ಮಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಅಗಮಿಸು
ವವರೆಗೂ ಕೆಲಸ ನಿಲ್ಲಿಸಲಾಗಿತ್ತು.
ಸಮಸ್ಯೆಯ ಬಗ್ಗೆ ಮಾಹಿತಿ ಪಡೆದ ಎ.ಸಿ.ರವಿಚಂದ್ರ ಹಾಗೂ ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್
ಸ್ಥಳಕ್ಕೆ ಭೇಟಿ ನೀಡಿ ರೈಲ್ವೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ರೈಲು ಇಲಾಖೆಗೆ ಸೇರಿದ ಜಮೀನು ಮಾತ್ರ ಒತ್ತುವರಿ ಮಾಡುವಂತೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಜಾಗದಲ್ಲಿ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ರಸ್ತೆಯಿಂದ 13 ಪೀಟ್ ಜಾಗವನ್ನು ಬಿಟು ಒತ್ತುವರಿ ಮಾಡುವಂತೆ ತಿಳಿಸಿದ ಬಳಿಕ ಇಲಾಖೆ ಯವರು ಕೆಲಸ ಪ್ರಾರಂಭಿಸಿದರು.
ಘಟನಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂಟ್ವಾಳ ವ್ರತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಬಂಟ್ವಾಳ ಎಸ್.ಐ.ಪ್ರಸನ್ನ ನೇತ್ರತ್ವದಲ್ಲಿ ಬಿಗಿಬಂದೋಬಸ್ತ್ ಏರ್ಪಾಡು ಮಾಡಲಾಗಿತ್ತು.
ಈ ಸಂಧರ್ಭದಲ್ಲಿ ಕಾಂಗ್ರೇಸ್ ಮಾಜಿ.ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್, ಗ್ರಾ.ಪಂ.ಉಪಾಧ್ಯಕ್ಷ ಹಾರೀಶ್ ಪೆರಿಮಾರ್, ಮಾಜಿ.ತಾ.ಪಂ.ಸದಸ್ಯ ಇಕ್ಬಾಲ್ ಮತ್ತಿತರ ರು ಹಾಜರಿದ್ದರು.













