
Image processed by CodeCarvings Piczard ### FREE Community Edition ### on 2018-05-04 03:01:55Z | | E
ಬೆಂಗಳೂರು: ಫೇಸ್ ಬುಕ್ ನಲ್ಲಿ ಅನೇಕ ಖಾತೆಗಳ ಮಾಹಿತಿ ಸೋರಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು . ಇದೀಗ ಹ್ಯಾಕರ್ ಗಳು ಐಡಿ ಹ್ಯಾಕ್ ಮಾಡುವ ಸುದ್ದಿಗಳು ಕೇಳಿಬರುತ್ತಿವೆ .
ವಿಶ್ವದ ಬಹುತೇಕ ಜನರ ಜೀವನದ ಭಾಗವಾಗಿರುವ ಅಂತರ್ಜಾಲ ಮಾಧ್ಯಮ ಫೇಸ್ ಬುಕ್ ಇದೀಗ ಎಷ್ಟು ಸೇಫ್ ಎಂಬ ಬಗ್ಗೆ ಅನುಮಾನಗಳು ಹುಟ್ಟ ತೊಡಗಿದೆ.
ಇತ್ತೀಚಿಗೆ ಸುಮಾರು 9 ಕೋಟಿ ಖಾತೆಗಳು ಹ್ಯಾಕ್ ಆಗಿವೆ ಎಂಬ ಸುದ್ದಿ ಕೇಳಿ ಬಂದಿತ್ತು. ನಿಮ್ಮ ಖಾತೆಗೆ ಬರುವ ಫ್ರೆಂಡ್ ರಿಕ್ವೆಸ್ಟ್ ಬಗ್ಗೆ ಎಚ್ಚರವಿರಲಿ.
ನಿಮಗೆ ಅರಿವಿರದವರನ್ನು ಫ್ರೆಂಡ್ ಮಾಡಿಕೊಳ್ಳುವಾಗ ಎಚ್ಚರವಿರಲಿ. ವಿವ್ ಆಸ್ ಎಂಬ ಸಂದೇಶಗಳು, ಕೆಲವೊಂದು ಲಿಂಕ್ ಗಳನ್ನೂ ಕ್ಲಿಕ್ ಮಾಡುವಾಗ ಕೂಡ ಎಚ್ಚರ ವಹಿಸುವುದು ಅನಿವಾರ್ಯವಾಗಿದೆ.













