Tuesday, March 17, 2026
ಸುದ್ದಿ

ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಕಾನೂನು ಮಾಹಿತಿ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು ನ್ಯಾಯವಾಧಿಗಳ ಸಂಘ ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಕಾನೂನು ಮಾಹಿತಿ ಕಾರ್ಯಕ್ರಮ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ಪ್ರಕಾಶ್ ಪಿ.ಎಂ ಗೌರವಾನ್ವಿತ ಪ್ರಧಾನ ವ್ಯಾವಹಾರಿಕ ನ್ಯಾಯಾಧಿಶರು ಮತ್ತು ಪ್ತಥಮ ದರ್ಜೆ ನ್ಯಾಂಯಿಕ ದಂಡಾಧಿಕಾರಿವಯವರು ಹಾಗೂ ಸದಸ್ಯ ಕಾರ್ಯದರ್ಶಿಯವರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ಇವರು ಉದ್ಘಾಟನಾ ಮಾತುಗಳನ್ನ ಹೇಳುವುದರ ಜೊತೆಗೆ ಯುವ ಶಕ್ತಿ ರಿಜಿಸ್ಟರ್ ಪುತ್ತೂರು ಬಹಳ ಮಹತ್ವಪೂರ್ಣ ಕೆಲವನ್ನ ಮಾಡ್ತಾ ಇದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಸಭಾಧ್ಯಕ್ಷತೆ ವಹಿಸಿದ ಶ್ರೀ ಝೇವಿಯರ್ ಡಿ ಸೋಜಾ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಇವರು ಮಕ್ಕಳಿಗೆ ಆತ್ಮ ಶಕ್ತಿಯ ಜೊತೆಗೆ ಬಲವಾದ ಒಂದೆ ಗುರಿ ಹೊಂದಿರಬೇಕೆಂದು ಹೇಳಿದರು. ವೇದಿಕೆಯಲ್ಲು ವಕೀಲರ ಸಂಘದ ಅಧ್ಯಕ್ಷರ ಸಂಘದ ಮನೋಹರ್ ಕೆ.ವಿ ಕಾರ್ಯದರ್ಶಿ ಮಂಜುನಾಥ ಎನ್.ಎಸ್, ಉಪಾಧ್ಯಕ್ಷರಾದ ಸುಶೀಲ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು.

ಗೌರವ ಉಪಸ್ಥತಿಯಲ್ಲಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯನಾದ ನ್ಯಾಯವಾಧಿ ಉದಯ ಶಂಕರ್ ಶೆಟ್ಟಿಯವರು ರಾಷ್ಟ್ರೀಯ ನಿರ್ಮಾಣದಲ್ಲಿ ಯುವಕರ ವತಿಯಿಂದ ಪಾತ್ರ ಬಹಳ ಮಹತ್ವಪೂರ್ಣ ಎಂದು ಕರೆಯುತ್ತಾರೆ.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನ್ಯಾಯವಾಧಿ ಮುರಳಿಕೃಷ್ಣ ವಿವೇಕಾನಂದರ ಆದರ್ಶ ಅಚಲವಾದ ವಿಶ್ವಾಸ , ಆತ್ಮ ಸಂಯಮ , ಧೃಢತೆ, ಯುವಕರಲ್ಲಿ ತುಂಬಲಿ ಎಂದು ಹಾರೈಸಿದ್ರು. ಖಜಂಜಿ ದಿವ್ಯರಾಜ್ ಹೆಗ್ಡೆ ಜೊತೆ ಕಾರ್ಯದರ್ಶಿ ಮಮತಾ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದರು.

ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ನಯನ.ರೈ. ಸ್ವಾಗತಿಸಿ ಸಹ ಪ್ರಾಂಶುಪಾಲ ಸ್ಟೀವನವರು ಧನ್ಯವಾದಿಸ್ರು. ನ್ಯಾಯವಾದಿ ಹರಿಣಾಕ್ಷಿ,ಜೆ, ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೋರ್ಟ್ ಸಿಬ್ಬಂದಿ ರಂಗಪ್ಪ ಅಕ್ಷತ್ ಪೆಟ್ರಿಕ್ ಲೋಬೋ ಉಪಸ್ಥಿತರಿದ್ರು. ತದ ನಂತರ ಹದಿ ಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನ ವತ್ಸಲ ನಾಯಕ್ ರವರು ನೀಡಿದರು.