
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಥಮ ಎಂ.ಕಾಂ ವಿದ್ಯಾರ್ಥಿನಿ ರಶ್ಮಿ ಬಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರ ನಡೆಸಿದ ಕನಕದಾಸ ಕೀರ್ತನೆಗಳ ‘ಕನಕಗಂಗೋತ್ರಿ’ ಕೀರ್ತನ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.

ಹಾಗೆಯೇ ಕರ್ನಾಟಕ ನೆಹರು ಯುವಕೇಂದ್ರ ಸಂಘಟನೆ ಆಯೋಜಿಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪೇಟ್ರಿಯಾಟಿಸಂ ಅಂಡ್ ನೇಶನ್ ಬಿಲ್ಡಿಂಗ್ ವಿಷಯದ ಕುರಿತಾಗಿ ಮಾತನಾಡಿ ಪ್ರಥಮ ಎಂ.ಕಾಂ ನ ಶ್ವೇತಾ ಜೆ ರಾವ್ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.














