Tuesday, March 17, 2026
ಸುದ್ದಿ

Breaking News : ಸುಳ್ಯದಲ್ಲಿ ವಿದ್ಯುತ್ ಶಾಕ್ ಗೆ ಯುವಕ ಮೃತ್ಯು ; ಮಸನವಾಯ್ತು ಮದುವೆ ಮನೆ – ಕಹಳೆ ನ್ಯೂಸ್

ಸುಳ್ಯ : ಮದುವೆ ಮನೆಯೊಂದರಲ್ಲಿ ಶಾಮಿಯಾನ ಹಾಕುತ್ತಿದ್ದಾಗ ಸಮೀಪ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಗೆ ತಾಗಿ ಶಾಮಿಯಾನ ಅಂಗಡಿಯ ಯುವಕ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಜೀರ್ಮುಕ್ಕಿಯ ಉಳಿಯ ದಿ. ಸತ್ಯನಾರಾಯಣ ಅವರ ಪುತ್ರ ಪ್ರೀತೇಶ್ ಮೃತಪಟ್ಟ ಯುವಕ. ಇವರು ಎಲಿಮಲೆಯ ಪ್ರಸಾದ್ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು

ಶಾಮಿಯಾನ ಹಾಕುತ್ತಿದ್ದ ವೇಳೆ ವಿದ್ಯುತ್ ಆಘಾತಕ್ಕೊಳಗಾದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟರೆನ್ನಲಾಗಿದೆ.
ಬಡ ಕುಟುಂಬದ ಪ್ರೀತೇಶ್ ಏಕೈಕ ಪುತ್ರನಾಗಿದ್ದು ತಾಯಿಗೆ ಆಸರೆಯಾಗಿದ್ದ.