Saturday, March 14, 2026
ಸುದ್ದಿ

ಎರಡು ಪ್ರೀಪೇಯ್ಡ್ ಯೋಜನೆ ಬದಲಾಯಿಸಿದ ಏರ್ಟೆಲ್ – ಕಹಳೆ ನ್ಯೂಸ್

ಟೆಲಿಕಾಂ ದಿಗ್ಗಜ ಭಾರ್ತಿ ಏರ್ಟೆಲ್ ಸಂಸ್ಥೆ ತನ್ನ ಎರಡು ಜನಪ್ರಿಯ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಷ್ಕರಿಸಿದೆ. ಗ್ರಾಹಕರಿಗೆ ಇದರಿಂದ ಹೆಚ್ಚು ವ್ಯಾಲಿಡಿಟಿ ಮತ್ತು ಡಾಟಾ ಲಭಿಸಲಿದೆ.

399 ಮತ್ತು 448 ರೂಪಾಯಿಗಳ ಯೋಜನೆ ಈಗ ಬದಲಾಗಿದೆ.70 ದಿನಗಳ ವ್ಯಾಲಿಡಿಟಿ ಹೊಂದಿದ್ದ 399 ರೂ. ಪ್ಲ್ಯಾನ್ ಈಗ 84 ದಿನಗಳ ವ್ಯಾಲಿಡಿಟಿ ಹೊಂದಲಿದೆ. ಇದರ ಜೊತೆಗೆ ಅನಿಯಮಿತ ಕರೆಗಳ ಸೌಲಭ್ಯ ಸಿಗಲಿದೆ.ಆದರೆ, ಈ ಯೋಜನೆಯಲ್ಲಿ ಸಿಗುತ್ತಿದ್ದ ಡೇಟಾ ಪ್ರಮಾಣವನ್ನು ತಗ್ಗಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ಲ್ಯಾನ್ ನಲ್ಲಿ ಈ ಹಿಂದೆ ದಿನಕ್ಕೆ 1.4 ಜಿಬಿ ಡೇಟಾ ಸಿಗುತ್ತಿತ್ತು. ಈಗ 1 ಜಿಬಿಗೆ ಇಳಿಸಲಾಗಿದೆ. ಆದರೆ, ದಿನಕ್ಕೆ ನೂರು ಎಸ್‌ಎಂಎಸ್ ಗಳು ಸಿಗಲಿವೆ.448 ರೂ. ಯೋಜನೆಯಲ್ಲಿ ಗ್ರಾಹಕರಿಗೆ 82 ದಿನಗಳ ವ್ಯಾಲಿಡಿಟಿ ಸಿಗಲಿದೆ.

ಜಾಹೀರಾತು
ಜಾಹೀರಾತು

ಈ ಹಿಂದೆ ಈ ಯೋಜನೆಯಲ್ಲಿ ದಿನಕ್ಕೆ 1.4 ಜಿಬಿ ಡೇಟಾ ಸಿಗುತ್ತಿದ್ದು, ಈಗ ಈ ಪ್ರಮಾಣವನ್ನು 1.5 ಜಿಬಿಗೆ ಹೆಚ್ಚಿಸಲಾಗಿದೆ. ಉಳಿದಂತೆ, ಅನಿಯಮಿತ ಒಳಬರುವ ಹಾಗೂ ಹೊರಹೋಗುವ ಕರೆಗಳು, ದಿನಕ್ಕೆ ನೂರು ಎಸ್‌ಎಂಎಸ್ ಗಳು ಸಿಗಲಿವೆ.