
ಮಂಗಳೂರು: ಮಂಗಳೂರಿನ ಈ ಯುವಕನ ಹೆಸರು ಗಿರೀಶ್ ಮಲ್ಯ. ಇಷ್ಟವಿಲ್ಲದೆ ಡಿಪ್ಲೋಮ ವಿದ್ಯಾಭ್ಯಾಸಕ್ಕೆ ಕಾಲಿಟ್ಟು ಕೈ ಸುಟ್ಟುಕೊಂಡ. ಕಲಿಕೆಯಲ್ಲಿ ಆಸಕ್ತಿ ಇಲ್ಲದೆ ಇರುವುದರಿಂದ ಡಿಪ್ಲೋಮ ವಿದ್ಯಾಭ್ಯಾಸ ಅರ್ಧಕ್ಕೆ ಕೈ ಬೀಡಬೇಕಾಯಿತು. ಆ ಸಮಯದಲ್ಲಿ ಇತನನ್ನು ಅನೇಕ ಜನರು ದೂಷಿಸಿದರು ಸಹ ತಾಳ್ಮೆ ಕಳೆದುಕೊಳ್ಳದ ಈ ಹುಡುಗ ತನ್ನ ಬೀಡುವಿನ ಸಮಯದಲ್ಲಿ ಯೂಟ್ಯೂಬ್‍ನಲ್ಲಿ ಬೀಟ್ ಬಾಕ್ಸ್ ಶೋ ನೋಡಿ ಆಶ್ಚರ್ಯ ಚಕಿತನಾದ, ನಾನು ಈ ವಿದ್ಯೆಯನ್ನು ಕಲಿಯಬೇಕು.
ನಾನು ಏನಾದರೂ ಸಾಧನೆ ಮಾಡಬೇಕು. ನನ್ನ ವಿರೋಧವಾಗಿ ಮಾತನಾಡುವವರ ಬಾಯಿ ಮುಚ್ಚಿಸಬೇಕು ಎಂದು ತನ್ನೂಳಗೆ ಪಣತೊಟ್ಟುಕೊಂಡ. ಬೀಟ್ ಬಾಕ್ಸ್ ವಿದ್ಯೆಯನ್ನು ಕಲಿಯಲು ಹಲವಾರು ತಿಂಗಳುಗಳ ಕಾಲ ಸತತ ಪ್ರಯತ್ನವು ಮಾಡಿ ಹೀಗೆ ಅನೇಕ ದಿನಗಳ ಪರಿಶ್ರಮದ ನಂತರ ಗಿರೀಶ್ ಮಲ್ಯ ಜೀ ಮ್ಯಾನ್ ಬೀಟ್ ಬಾಕ್ಸ್‍ರ್ ಆಗಿ ಬದಲಾದ. ಈಗ ಈ ಹುಡುಗ ಮಂಗಳೂರು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ. ಹೌದು ಇವನ ಈ ಸಾಧನೆಗೆ ಕಾರಣ ಇತನ ತಂದೆ ತಾಯಿ ಜೊತೆಗೆ ಗೆಳೆಯರು ಎಂದು ಸಂತೋಷದಿಂದ ಹೇಳಿಕೊಳ್ಳತ್ತಾನೆ.
ನಿಮಗೆ ಬೀಟ್ ಬಾಕ್ಸ್ ಯಾಕೆ ಇಷ್ಟ ?
ನಾನು ಸದಾ ಯೂಟ್ಯೂಬ್‍ನಲ್ಲಿ ಬೀಟ್ ಬಾಕ್ಸ್ ಶೋ ನೋಡುತ್ತಿದ್ದೆ. ಬೀಟ್ ಬಾಕ್ಸ್ ಟ್ರೆಂಡ್‍ಗೆ ನಾನು ಫಿದಾ ಆದೆ. ನನಗೂ ಈ ವಿದ್ಯೆಯಲ್ಲಿ ಆಸಕ್ತಿ ಮೂಡಿತು.್ತ ನಾನು ಬೀಟ್ ಬಾಕ್ಸ್ ಕಲಿತು ಸಾಧನೆ ಮಾಡಬೇಕು ಅಂತ ಅಂದುಕೊಂಡೆ. ಈಗ ನನ್ನ ಸಮಯ ಪ್ರಾರಂಭವಾಗಿದೆ. ಬೀಟ್ ಬಾಕ್ಸ್ ಹಾವಳಿ ನಮ್ಮ ರಾಜ್ಯದಲ್ಲಿ ತುಂಬಾ ಕಡಿಮೆ ಇದ್ದು ಇದಕ್ಕೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಸರಿಯಾದ ರೀತಿಯಾ ಮಾರ್ಗದರ್ಶನದಿಂದ ಅನೇಕ ಪ್ರತಿಭೆಗಳು ಬೆಳಕಿಗೆ ಬರುತ್ತದೆ.

ಯೂಟ್ಯೂಬ್ ಜೊತೆಗೆ ನಿಮಗೆ ಪ್ರೇರಣೆ ಯಾರು ?
ನನ್ನ ಅಣ್ಣ ಅಕ್ಷಯ್ ಕೂಡ ಬೀಟ್ ಬಾಕ್ಸ್‍ರ್ ನಾವು ಜೊತೆ ಸೇರಿ ಅನೇಕ ಕಡೆಗಳಲ್ಲಿ ಜೊತೆಯಾಗಿ ಕಾರ್ಯಕ್ರಮವನ್ನು ನೀಡಿದ್ದೇವೆ ಅಕ್ಷಯ್ ಇಂದಿಗೂ ಕೂಡ ನನಗೆ ಬೀಟ್ ಬಾಕ್ಸ್ ಗುರುವಾಗಿದ್ದಾರೆ.
ನಿಮ್ಮ ಸ್ಟೇಜ್ ಶೋ…. ?
ಮೊದಲಿಗೆ ನಾನು ಬರ್ತಡೆ ಪಾರ್ಟಿಯಲ್ಲಿ ಶೋವನ್ನು ನೀಡಿ ಜನರಿಂದ ಚಪ್ಪಾಳೆಗಿಟ್ಟಿಸಿಕೊಂಡೆ, ತದ ನಂತರ ಬಿಗ್‍ಬಜಾರ್, ಆಲೋಷಿಯಸ್ ಕಾಲೇಜು ಸೇರಿದಂತೆ ಹಲವಾರು ಕಡೆಯಲ್ಲಿ ನನ್ನ ಶೋ ನೀಡಿದ್ದೇನೆ. ಇನ್ನು ಜನರು ಪ್ರೋತ್ಸಾಹ ನೀಡಿದರೆ ದೊಡ್ಡ ಮಟ್ಟದ ಕಾರ್ಯಕ್ರಮ ನೀಡುವ ಹಂಬಲ ಇದೆ.

ಯಾವುದೇ ವಾದ್ಯಗಳ ಸಹಾಯವಿಲ್ಲದೆ ಬಾಯಿಯ ಮೂಲಕ ಬೀಟ್ ಬಾಕ್ಸ್ ಹೇಗೆ ಸಾಧ್ಯ ?
ಛಲವಿದ್ದರೆ ಅಸಾಧ್ಯವಾದ್ದದ್ದು ಸಾಧ್ಯವಾಗುತ್ತದೆ. ಸರಿಯಾಗಿ ಅಭ್ಯಾಸ ಮಾಡಿದರೆ ಎಲ್ಲಾವೂ ಸುಲಭ. ಮಾಡುವ ಕೆಲಸದಲ್ಲಿ ಶ್ರದ್ದೆ ಇರಬೇಕು ಅಷ್ಟೆ.
ನೀವು ನಿಮ್ಮ ದನಿಯಲ್ಲಿ ಯಾವೆಲ್ಲಾ ಬೀಟ್ ಬಾಕ್ಸ್ ಮಾಡಬಲ್ಲಿರಿ.?
ಅನೇಕ ತಿಂಗಳುಗಳ ಸತತ ಪ್ರಯತ್ನದಿಂದ ನಾನು ಟ್ರೋತ್ ಬೇಸ್, ಲಿಪ್ ರೋಲ್, ಕಿಕ್ ಬಾಯ್, ಹೈ ಹೆಡ್ಸ್ ಮುತಾಂದ ಶೈಲಿಯನ್ನು ನಾನೆ ಮಾಡಬಲ್ಲೆ.

ಬೀಟ್ ಬಾಕ್ಸ್ ಕಲಾವಿದರಲ್ಲಿ ನಿಮಗೆ ಇಷ್ಟ ಯಾರು. ?
ಕೆನ್ನಿ ಹರ್ಬನ್, ನೆಪೋನ್ ನಾನು ತುಂಬಾ ಇಷ್ಟ ಪಡುವ ಕಲಾವಿದರು ಇವರ ಶೋಗಳನ್ನು ಅಧಿಕವಾಗಿ ವಿಕ್ಷೀಸುತ್ತೆನೆ
ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಶೋ ವಿಡಿಯೋ ಪೋಸ್ಟ್ ಮಾಡ್ತಿರ ? ಯಾವ ರೀತಿ ಪ್ರತಿಕ್ರಿಯೆ ಸಿಗ್ತಾ ಇದೆ ?
ಇಂಷ್ಟಗ್ರಾಮ್‍ನಲ್ಲಿ ನನ್ನ ಶೋ ವಿಡಿಯೋ ಅಧಿಕ ಜನ ನೋಡಿ ನನಗೆ ಬ್ಯಾಕ್ ಬೋನ್‍ಗಳಾಗಿ ದೈರ್ಯ ತುಂಬುತ್ತಿದ್ದಾರೆ, ಇಂಷ್ಟಗ್ರಾಮ್‍ನಲ್ಲಿ ಪೋಸ್ಟ್ ನೋಡಿ ನಮ್ಮಲ್ಲಿಯು ಬಂದು ಬೀಟ್ ಬಾಕ್ಸ್ ಶೋ ನೀಡುವಿರಾ ಎಂದು ಕೇಳಿದ್ದಾg,É ಆ ಸಮಯದಲ್ಲಿ ನಾನು ತುಂಬಾ ಸಂತೋಷದಿಂದ ಬರುತ್ತೇನೆ ಎಂದು ಒಪ್ಪಿಕೊಂಡಿದ್ದೇನೆ. ಅಷ್ಟೆ ಅಲ್ಲದೆ ನನ್ನ ಗೆಳೆಯರು ನನನ್ನು ಪ್ರೀತಿಯಿಂದ ಜೀ ಮ್ಯಾನ್ ಬೀಟ್ ಬಾಕ್ಸರ್ ಎಂದು ಕರೆಯುತ್ತಾರೆ.

ಬೀಟ್ ಬಾಕ್ಸ್ ಹೊರತು ಯಾವ ಕ್ಷೇತ್ರ ನಿಮಗೆ ಆಸಕ್ತಿ ಇದೆ. ?
ನನಗೆ ಡ್ಯಾನ್ಸ್ ಹಾಗೂ ಕ್ರೀಡಾ ರಂಗದಲ್ಲಿ ಹೆಚ್ಚಿನ ಆಸಕ್ತಿ ಇದೆ. ನಾನು ಹ¯ವಾರು ಕಡೆಗಳಲ್ಲಿ ಡ್ಯಾನ್ಸ್ ಕುರಿತ ಅನೇಕ ಶೋಗಳನ್ನು ನೀಡಿದ್ದೇನೆ.
ನಿಮ್ಮ ಮುಂದಿನ ಗುರಿ ?
ಆಸೆ ಮನಜನಿಗೆ ಸಹಜ ನನ್ನ ಆಸೆ ತುಂಬಾ ದೊಡ್ಡದು ಆದರೆ ಅದು ಜನರಿಗೆ ಚಿಕ್ಕದು ಅಂತ ಕಾಣಲು ಬಹುದು. ನನಗೆ ನನ್ನದೆ ಆದ ಬೀಟ್ ಬ್ಯಾಕ್ಸ್ ತರಬೇತಿ ಶಾಲೆ ತೆಗೆಯಬೇಕು ಅಲ್ಲಿ ಉಚಿತವಾಗಿ ಮಕ್ಕಳಿಗೆ ಬೀಟ್ ಬಾಕ್ಸ್ ಬಗ್ಗೆ ತರಬೇತಿ ನೀಡಬೇಕು. ನಾನೆ ಕಟ್ಟಿದ ತಂಡದೊಂದಿಗೆ ವಿದೇಶದಲ್ಲಿ ನಡೆಯುವ ಬೀಟ್ ಬಾಕ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
ಈ ಪುಟ್ಟಹೃದಯ ವಿದೇಶದಲ್ಲಿ ನಡೆಯುವ ಬೀಟ್ ಬಾಕ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕೆಂಬ ಕಾತರದಲ್ಲಿದ್ದಾನೆ. ಈ ಬೀಟ್ ಬಾಕ್ಸ್‍ರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಭಾರತದಲ್ಲಿಯೂ ಬೀಟ್ ಬಾಕ್ಸ್‍ರ್ಸ್ ಇದ್ದಾರೆ ಎಂದು ತೋರಿಸಲಿ ಎಂಬುದೆ ನಮ್ಮ ಆಶಯ.
ರಾಜೇಂದ್ರ ಶೆಣೈ ನ್ಯೂಸ್ ಡೆಸ್ಕ್ ಕಹಳೆ ನ್ಯೂಸ್
















