
ಪುತ್ತೂರು: ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ಸುವರ್ಣ ಮಹೋತ್ಸವ ಸಂಭ್ರಮವು ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು.
ಈ ವೇಳೆ ಯಕ್ಷಗಾನದಲ್ಲಿ ಸಮಾಜಿಕ ಜಾಲತಾಣಗಳ ಮಾರಕ ಪೂರಕ ವಿಚಾರದ ಬಗ್ಗೆ ಕರ್ನಾಟಕ ಯಕ್ಷಗಾನ ಬಯಲಾಟ ಆಕಾಡೆಮಿ ಬೆಂಗಳೂರು ಇದರ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕವಳ್ಳಿ ಮಾತನಾಡಿದರು. ಈ ವೇಳೆ ಕರ್ನಾಟಕ ಯಕ್ಷಗಾನ ಬಯಲಾಟ ಆಕಾಡೆಮಿ ಬೆಂಗಳೂರು ಇದರ ಮಾಜಿ ಸದಸ್ಯೆ ಗೌರಿ ಸಾಸ್ತನ, ಯಕ್ಷಗಾನ ವಿದ್ವಾಂಸ, ವಿಮರ್ಶಕ ಎಂ ಪ್ರಭಾಕರ್ ಜೋಶಿ ಉಪಸ್ಥಿತರಿದ್ದರು.













