
ಮಂಗಳೂರು: ಪೊಲೀಸರಿಗೆ ಹೆದರಿ ಸೈಡ್ ಹೋದ ಲಾರಿ ಪಲ್ಟಿಯಾಗಿ ಕ್ಲೀನರ್ ಸಾವನ್ನಪ್ಪಿರೋ ಘಟನೆ ಮಂಗಳೂರು ನಗರ ಹೊರವಲಯದ ತೊಕ್ಕೊಟ್ಟು ಜಂಕ್ಷನ್ನಲ್ಲಿ ನಡೆದಿದೆ.
ಲೋಡು ತುಂಬಿದ್ದ ಲಾರಿ ಪಲ್ಟಿಯಾಗಿ ಕೆಳಗೆ ಬಿದ್ದು ಕ್ಲೀನರ್ ಶಿವಮೊಗ್ಗ ಮೂಲದ ವಸಂತ್ ಕುಮಾರ್ (25) ಸಾವನ್ನಪ್ಪಿದ ಯುವಕ. ಪೊಲೀಸರ ನಿರ್ಲಕ್ಷ್ಯ ಎಂದು ಆರೋಪಿಸಿದ ಸ್ಥಳೀಯರು ಪೊಲೀಸರ ವಿರುದ್ಧ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

















