ರಾಜ್ಯ ಸರ್ಕಾರದಿಂದ ಶಿಕ್ಷಕರಿಗೆ ಸಿಹಿಸುದ್ದಿ: ವರ್ಗಾವಣೆ ಕನಿಷ್ಠ ಸೇವಾವಧಿ ಮೂರು ವರ್ಷಕ್ಕೆ ಇಳಿಕೆ – ಕಹಳೆ ನ್ಯೂಸ್

ಬೆಂಗಳೂರು: ವಿವಿಧ ವಲಯದಲ್ಲಿದ್ದ ಶಿಕ್ಷಕರ ವರ್ಗಾವಣೆಯ ಕನಿಷ್ಠ ಸೇವಾವಧಿಯನ್ನು ಐದರಿಂದ ಮೂರು ವರ್ಷಗಳಿಗೆ ಇಳಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯ ಸಿವಿಲ್ ಸೇವೆಗಳ ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದ್ದಾರೆ.
ಈ ಮೂಲಕ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಸಾವಿರಾರು ಶಿಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಇದಲ್ಲದೇ ಕನಿಷ್ಠ ಸೇವಾವಧಿ ಐದು ವರ್ಷದಿಂದ ಮೂರು ವರ್ಷಕ್ಕೆ ಕಡಿತಗೊಳಿಸಲಾಗಿದೆ.
ಇನ್ನು ಶಿಕ್ಷಕರಿಗೆ ಪತಿ ಅಥವಾ ಪತ್ನಿ ಸರ್ಕಾರಿ ಅಥವಾ ಸಾರ್ವಜನಿಕ ವಲಯ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಸ್ಥಳಗಳಿಗೆ ವರ್ಗಾವಣೆಗೆ ಅವಕಾಶವನ್ನು ಕೂಡ ಕಾಯಿದೆ ಒಳಗೊಂಡಿದೆ.














