Thursday, March 19, 2026
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ರಾಜ್ಯದಲ್ಲಿ ಮತ್ತೆರೆಡು ದಿನ ಭಾರೀ ಮಳೆ : 20 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ -ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕದ ಹಲವೆಡೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಧಾರವಾಡ, ದಾವಣಗೆರೆ, ಶಿವಮೊಗ್ಗ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಕೊಡಗು ಮೈಸೂರು, ಬೆಂಗಳೂರು ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ತುಮಕೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ ಹಲವಾರು ಭಾಗಗಳಲ್ಲಿ ಬುಧವಾರ (ಮಾ.18) ಭಾರೀ ಮಳೆಯಾಗಿದೆ. ಬೆಂಗಳೂರಿನ ಎಂಜಿ ರಸ್ತೆ, ಕಲ್ಯಾಣ್ ನಗರ, ಬಳ್ಳಾರಿ ರಸ್ತೆ, ಜಯನಗರ, ಬನಶಂಕರಿ, ಮೆಜೆಸ್ಟಿಕ್, ಶಾಂತಿನಗರ ಮತ್ತು ಕೋರಮಂಗಲದಂತಹ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆಯಾಗಿದೆ. ಬೆಂಗಳೂರಿನಲ್ಲಿ ಸಂಜೆ ತಡವಾಗಿ ಸುರಿದ ಮಳೆಯಿಂದಾಗಿ ನೀರು ನಿಂತು ವಾಹನ ಸವಾರರು ಪರದಾಡಿದ್ದರು.

ಜಾಹೀರಾತು
ಜಾಹೀರಾತು

ಹಳೆ ಮದ್ರಾಸ್ ರಸ್ತೆ, ಪೈ ಲೇಔಟ್, ಮಹದೇವಪುರ, ಅಲ್ಲಾಳಸಂದ್ರ ಮುಖ್ಯ ರಸ್ತೆ, ಚೊಕ್ಕಸಂದ್ರ ಮೇಲ್ಸೇತುವೆ, ಬಿಳೇಕಹಳ್ಳಿ–ಅರೆಕೆರೆ ರಸ್ತೆ, ಕೋಗಿಲು ರಸ್ತೆ, ಬಿನ್ನಿ ಮಿಲ್ ರಸ್ತೆ ಮತ್ತು ಹುಣಸೇಮರ ಜಂಕ್ಷನ್ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನಸವಾರರು ಮಳೆಯಿಂದಾಗಿ ತೊಂದರೆಗೀಡಾಗಿದ್ದರು.

ದೆಹಲಿಯಲ್ಲೂ ಮಳೆ – ಜನರಿಗೆ ಐಎಂಡಿ ಎಚ್ಚರಿಕೆ
ದೆಹಲಿಯಾದ್ಯಂತ ಬೀಸುತ್ತಿರುವ ವೇಗದ ಗಾಳಿಯಿಂದಾಗಿ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಜನ ಮನೆಯೊಳಗೆ ಸುರಕ್ಷಿತವಾಗಿ ಇರಬೇಕು. ಕಿಟಕಿಗಳು, ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ಲೈನ್‌ ಬಳಿ ನಿಲ್ಲಬಾರದು. ಶಿಥಿಲಗೊಂಡ ಕಟ್ಟಡಗಳಿಂದ ದೂರವಿರುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಕೆಟ್ಟ ಹವಾಮಾನದಿಂದಾಗಿ 16 ವಿಮಾನಗಳನ್ನು ಇತರ ನಗರಗಳಿಗೆ ತಿರುಗಿಸಲಾಗಿದೆ ಎಂದು ವರದಿಯಾಗಿದೆ.