ಶ್ರೀ ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ (ರಿ.)ಕೆದ್ದೇಲು, ನರಿಕೊಂಬು ವತಿಯಿಂದ 20ನೇ ವರ್ಷದ ಯಕ್ಷಗಾನ ಬಯಲಾಟ- ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ (ರಿ.)ಕೆದ್ದೇಲು, ನರಿಕೊಂಬು ಇದರ 20ನೇ ವರ್ಷದ ಅಂಗವಾಗಿ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಮಂಗಳೂರು ಇವರಿಂದ ಶ್ರೀ ದೇವದಾಸ್ ಈಶ್ವರಮಂಗಲ ವಿರಚಿತ *ಬಂಟಮಲೆ ಭಾರ್ಗವಿ* ಎಂಬ ತುಳು ಯಕ್ಷಗಾನ ಬಯಲಾಟವು ದಿನಾಂಕ 22-3-2026 ನೇ ಆದಿತ್ಯವಾರ ರಾತ್ರಿ 9:30 ರಿಂದ ನರಿಕೊಂಬು ಗ್ರಾಮದ ಕೆದ್ದೇಲು ಬಾಕಿಮಾರು ಗದ್ದೆಯಲ್ಲಿ ನಡೆಯಲಿರುವುದು.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ (ರಿ.)ಕೆದ್ದೇಲು, ನರಿಕೊಂಬು ಅಧ್ಯಕ್ಷರಾದ ರಂಜಿತ್ ಕೆದ್ದೇಲು ತಿಳಿಸಿರುತ್ತಾರೆ.















