
ಬೆಳ್ತಂಗಡಿ :ಮಾ.17.ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಸಂಘಟನಾತ್ಮಕ ಸಭೆ ಪಕ್ಷದ ಕಚೇರಿಯಲ್ಲಿ ನಡೆಯಿತು. ಬೆಳ್ತಂಗಡಿ ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ, ಬೆಳ್ತಂಗಡಿ ಮಂಡಲ ಯುವಮೋರ್ಚಾ ಪ್ರಭಾರಿ ಸುರೇಶ್ ಕೋಟ್ಯಾನ್ ಬಂಟ್ವಾಳ ಇವರು, ಮುಂದಿನ ಕಾರ್ಯ ಯೋಜನೆ, ಚಟುವಟಿಕೆ,ಕೈಗೊಳ್ಳಬೇಕಾದ ಕೆಲಸ ಕಾರ್ಯದ ಬಗ್ಗೆ ವಿಸ್ಕೃತವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಯುವಮೋರ್ಚಾ ಜಿಲ್ಲಾಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಬಂಟ್ವಾಳ ಮಂಡಲ ಬಿಜೆಪಿ ಪ್ರಮುಖರಾದ ಸಂಪತ್ ಕೋಟ್ಯಾನ್ ,ಜಿಲ್ಲಾ ಮನ್ ಕೀ ಭಾತ್ ಪ್ರಮುಖರಾದ ಸೀತಾರಾಮ ಬೆಳಾಲು,ಯುವಮೋರ್ಚಾ ಮಂಡಲ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.















