ಸೌತಡ್ಕ ಸೇವಾಧಾಮದಲ್ಲಿ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ಉದ್ಘಾಟನೆ – ಕಹಳೆ ನ್ಯೂಸ್

ಸೌತಡ್ಕ : ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಅದರಂತೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಲಾಗಿತ್ತು. ಈ ತಿಂಗಳಲ್ಲಿ 32 ಗಾಲಿಕುರ್ಚಿಗಳನ್ನು ವಿತರಿಸುವುದಾಗಿ ನಿರ್ಧರಿಸಿದ್ದು ಉಡುಪಿಯ ಶ್ರೀ ನಿಹಾಲ್ ವಿಲ್ಸನ್, ಕಾರ್ಕಳದ ಶ್ರೀ ಸಂದೀಶ್, ಆತ್ರಾಡಿಯ ಶ್ರೀ ರಮೇಶ್ ನಾಯ್ಕ್ ರವರಿಗೆ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮವನ್ನು ಮಾರ್ಚ್ 15 ರಂದು ಸೌತಡ್ಕ ಸೇವಾಧಾಮ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದಲ್ಲಿ ನಡೆಸಲಾಯಿತು.
ನಿವೃತ್ತ ಮಹಿಳಾ ಆರೋಗ್ಯ ಸಂದರ್ಶಕರು ಹಾಗೂ ಸೇವಾಭಾರತಿ POSH ಕಮಿಟಿಯ ಅಧ್ಯಕ್ಷರಾದ ಶ್ರೀಮತಿ ವಸಂತಿ ಗೌಡರವರು ಕಾರ್ಯಕ್ರಮವನ್ನು ಉದ್ಘಾಟಿಸಿ ದಿವ್ಯಾಂಗರಿಗೆ ಶುಭಹಾರೈಸಿ ವಿಶ್ವಾಸ ಬದುಕಿಗಾಗಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲಾ ಸಹ ಪ್ರಚಾರ ಪ್ರಮುಖ ಶ್ರೀ ಗಣೇಶ್ ಕೊಕ್ಕಡ, ಕೊಕ್ಕಡದ ಶ್ರೀಮತಿ ಮಾಳವಿಕ, ಸೇವಾಭಾರತಿ ಅಧ್ಯಕ್ಷರಾದ ಶ್ರೀ ವಿನಾಯಕ ರಾವ್, ಟ್ರಸ್ಟಿ ಶ್ರೀಮತಿ ಸ್ವರ್ಣಗೌರಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.













