Friday, March 13, 2026
ಜಿಲ್ಲೆರಾಷ್ಟ್ರೀಯಸುದ್ದಿ

ಭಾರತೀಯ ಮೂಲದ ಸಹೋದರರಿಗೆ 400 ವರ್ಷ ಶಿಕ್ಷೆ? : ಯುಎಸ್‌ನಲ್ಲಿ ಬಹುಕೋಟಿ ವಂಚನೆ ಕೇಸ್‌ – ಕಹಳೆ ನ್ಯೂಸ್

ವಾಷಿಂಗ್ಟನ್: ಭಾರತೀಯ ಮೂಲದ ಸಹೋದರರಿಬ್ಬರು ಅಮೆರಿಕಾದಲ್ಲಿ ಬಹುಕೋಟಿ ವಂಚನೆ ಮಾಡಿರುವ ಬಗ್ಗೆ ಅಪರಾಧ ಸಾಬೀತಾಗಿದ್ದು, 400 ವರ್ಷ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

ಪೆನ್ಸಿಲ್ವೇನಿಯಾದ ಇಬ್ಬರು ಭಾರತೀಯ ಮೂಲದ ಸಹೋದರರಾದ ಭಾಸ್ಕರ್ ಸವಾನಿ (60) ಮತ್ತು ಅರುಣ್ ಸವಾನಿ (58) ವಂಚನೆ ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾಗಿದೆ. ವೀಸಾ ವಂಚನೆ, ಆರೋಗ್ಯ ವಿಮೆ ವಂಚನೆ, ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ಸೇರಿದಂತೆ ಹಲವು ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಅಪರಾಧಿಗಳೆಂದು ಅಮೆರಿಕಾದ ಅಟಾರ್ನಿ ಕಚೇರಿ ಆದೇಶ ಹೊರಡಿಸಿದ್ದು, ಶಿಕ್ಷೆಯ ಪ್ರಮಾಣ ಘೋಷಿಸಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಪರಾಧಿಗಳಿಬ್ಬರು ಸವಾನಿ ಗ್ರೂಪ್ ಎಂದು ಕರೆಯಲ್ಪಡುವ ವೆಬ್‌ಸೈಟ್‌ವೊಂದನ್ನು ಶುರುಮಾಡಿ, ಈ ಮೂಲಕ ಕಾನೂನು ಬಾಹಿರವಾಗಿ ಹಣ ಗಳಿಸಿದ್ದಾರೆಂದು ತಿಳಿದುಬಂದಿದೆ. ಅಲ್ಲದೇ ವೃತ್ತಿಯಲ್ಲಿ ದಂತವೈದ್ಯನಾಗಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಸವಾನಿ, ವೈದ್ಯಕೀಯ ವಿಭಾಗಕ್ಕೆ ಸಂಬಂಧಿಸಿದ ವಂಚನೆಗಳಲ್ಲಿ ತೊಡಗಿಕೊಂಡಿದ್ದ ಎಂದು ತಿಳಿಸಿದೆ.

ಜಾಹೀರಾತು
ಜಾಹೀರಾತು

ಹೊರದೇಶದವರನ್ನು ನೇಮಕ ಮಾಡಿಕೊಳ್ಳಲು ವೀಸಾ ಅರ್ಜಿಗಳಲ್ಲಿ ವಂಚನೆ, ಅಕ್ರಮ ಹಣ ವರ್ಗಾವಣೆ, ವೈದ್ಯಕೀಯ ವಿಭಾಗಕ್ಕೆ ಸಂಬಂಧಿಸಿದ ವಂಚನೆ, ತೆರಿಗೆ ವಂಚನೆ ಸೇರಿದಂತೆ ಬೇರೆ ರೀತಿಯ ಹಲವು ಖರ್ಚುಗಳನ್ನು ಮುಚ್ಚಿಹಾಕಿದ್ದರು.

ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ 400 ವರ್ಷ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಅಲೆಕ್ಸಾಂಡ್ರಾ ರಾಡೋಮಿಯಾಕ್ ಅಪರಾಧ ಸಾಬೀತಾಗಿದ್ದು, 40 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸುವ ಸಾಧ್ಯತೆಯಿದೆ.