Friday, March 13, 2026
ಸುದ್ದಿ

ಮಂಗಳೂರು ಮಂಗಳಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ನೃತ್ಯ ವೈಭವ – ಪ್ರೇಕ್ಷಕರ ಮೆಚ್ಚುಗೆ ಪಡೆದ ಮಕ್ಕಿಮನೆ ಕಲಾವೃಂದ – ಕಹಳೆ ನ್ಯೂಸ್

ಮಂಗಳೂರು: ಇತಿಹಾಸ ಪ್ರಸಿದ್ಧ ಮಂಗಳಾದೇವಿ ದೇವಸ್ದಾನ ದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವ–2026ರ ಅಂಗವಾಗಿ ಇತ್ತೀಚೆಗೆ (9-3-2026) ಮಲ್ಲಿಕಾ ಕಲಾವೃಂದ ಮಂಗಳೂರು ಆಶ್ರಯದಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದ ಕಲಾವಿದರಿಂದ ‘ನೃತ್ಯ ವೈಭವ’ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಕಲಾವಿದರ ಮನಮೋಹಕ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನಗೆದ್ದು ಎಲ್ಲರಿಂದಲೂ ಭಾರೀ ಪ್ರಶಂಸೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಕರ್ನಾಟಕ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುದೇಶ್ ಕುಮಾರ್ ಮಂಗಳೂರು ಅವರು ಆರಂಭದಿಂದಲೂ ಮಕ್ಕಿಮನೆ ಕಲಾವೃಂದಕ್ಕೆ ಕೊಟ್ಟ ಸಹಕಾರ ಹಾಗೂ ಇತ್ತೀಚೆಗೆ “ಕನ್ನಡ ಉಳಿಸಿ ಬೆಳೆಸಿ “ಅಭಿಯಾನದ ಮಾಧ್ಯಮ ವಕ್ತಾರರಾಗಿ ಆಯ್ಕೆಯಾದ ಈ ಶುಭಸಂದರ್ಭದಲ್ಲಿ ಪ್ರೀತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಮಲ್ಲಿಕಾ ಕಲಾವೃಂದದ ಕಾರ್ಯಧ್ಯಕ್ಷ ಸುಧಾಕರ ರಾವ್ ಪೇಜಾವರ, ಭಾರತೀಯ ಜೈನ್ ಮಿಲನ್ ಮಂಗಳೂರು ಅಧ್ಯಕ್ಷ ರತ್ನಾಕರ ಜೈನ್, ಶ್ರೀ ರತ್ನ ಪ್ರತಿಷ್ಠಾನ ಅಧ್ಯಕ್ಷ ಮಾಧವ ಶಿವಮೊಗ್ಗ ಹಾಗೂ ವಿನಯಾನಂದ, ಪ್ರಿಯದರ್ಶಿನಿ ಜೈನ್, ರಿಮಾ ಜಗನ್ನಾಥ್, ಅಶಿಶ್ ಅಂಚನ್, ಲಾವಣ್ಯ ರವಿ ಶಾಂತಿ, ನೇಹಾ ಅಮಿನ್, ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಶ್ರೇಯಾ ದಾಸ್ ಸುಂದರವಾಗಿ ನಿರೂಪಿಸಿದರು. ಶ್ರೀಲತಾ ಜೈನ್, ಚಂದ್ರಾವತಿ, ಮನಸ್ಸಿ, ತನುಸ್ವಿ, ಗೌರವ್ ಜೈನ್ ಹಾಗೂ ಇತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಾಂಸ್ಕೃತಿಕ ವೈಭವ ಮತ್ತು ಕಲಾತ್ಮಕ ಅಭಿವ್ಯಕ್ತಿಗಳಿಂದ ಕಂಗೊಳಿಸಿದ ಈ ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಮನದಲ್ಲಿ ಮರೆಯಲಾಗದ ಅನುಭವ ಮೂಡಿಸಿತು.

ಜಾಹೀರಾತು
ಜಾಹೀರಾತು