ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ “ಜ್ಞಾನ ವಿಕಾಸ ” ಕಾರ್ಯಕ್ರಮ ದಡಿಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ-ಕಹಳೆ ನ್ಯೂಸ್

ಕಾಸರಗೋಡು ಜಿಲ್ಲೆಯ ಚೆoಗಳ ಪಂಚಾಯತಿನ ಒಂದನೇ ವಾರ್ಡಿನ ಮೀನಾಡಿ ಪಲ್ಲ ಯಮುನಾ ಎಂಬವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕಾಸರಗೋಡು ತಾಲೂಕಿನ ವಾತ್ಸಲ್ಯ ಸದಸ್ಯರಾದ ಯಮುನಾ ರವರಿಗೆ ಕ್ಷೇತ್ರದಿಂದ ಮಂಜೂರಾದ ವಾತ್ಸಲ್ಯ ಮನೆಯ ಹಸ್ತಾಂತರ ಕಾರ್ಯಕ್ರಮವನ್ನು ಕಾಸರಗೋಡು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಅಖಿಲೇಶ್ ನಗಮಗಂ ಅವರ ಅಧ್ಯಕ್ಷತೆಯಲ್ಲಿ ಚೆoಗಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಸಂತ ಅಜಕ್ಕೋಡು ನಾಮಫಲಕ ಅನಾವರಣ ಮಾಡಿದರು. ದಕ್ಷಿಣ ಕನ್ನಡ -2 ಜಿಲ್ಲೆಯ ಮಾನ್ಯ ನಿರ್ದೇಶಕರಾದ ಬಾಬು ನಾಯ್ಕ ಸರ್ ಫಲ ಪುಷ್ಪದೊಂದಿಗೆ ಮನೆಯ ಕೀ ನೀಡಿ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು .ಜನಜಾಗೃತಿ ಸದಸ್ಯರಾದ ನವೀನ್ ಭಟ್, ಬದಿಯಡ್ಕ ಪಂಚಾಯತ್ ಸದಸ್ಯರಾದ ಶ್ಯಾಮ್ ಪ್ರಸಾದ್, ತಾಲೂಕಿನ ಯೋಜನಾಧಿಕಾರಿಗಳಾದ ದಿನೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯ ಗಿರೀಶ್, ಮಾನ್ಯ ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿ ಹೇಮಲತಾ ಎಡನೀರು ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿ ರಾಜೀವಿ ಮಾನ್ಯ ಒಕ್ಕೂಟದ ಅಧ್ಯಕ್ಷರಾದ ಸುನಿಲ್ ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು
ಅಸಹಾಯಕ ವ್ಯಕ್ತಿಗಳು ಯಾರ ಪೋಷಣೆಯು ಇಲ್ಲದೆ ಹಾಗೂ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ಅತ್ಯಂತ ದುಃಸ್ಥಿತಿಯಲ್ಲಿರುವ ತಮ್ಮ ಜೀವನವನ್ನು ನಡೆಸುತ್ತಿರುವುದನ್ನು ಕಂಡು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಆ ವ್ಯಕ್ತಿಗಳ ಜೀವನಕ್ಕೆ ಬೆಳಕಾಗಲು ಅವರ ವಾತ್ಸಲ್ಯಮಯ ಮನದಿಂದ ಮೂಡಿಬಂದ ಕಾರ್ಯಕ್ರಮವೇ ವಾತ್ಸಲ್ಯ ಕಾರ್ಯಕ್ರಮ ಇಂತಹ ಕುಟುಂಬಗಳ ಸರ್ವೇಕ್ಷಣೆ ನಡೆಸಿ ತಾಲೂಕಿನಲ್ಲಿ ತಿಂಗಳಲ್ಲಿ 88 ಕುಟುಂಬಗಳಿಗೆ 88 ಸಾವಿರ ಮೊತ್ತದ ಮಾಸಾಶನ ನೀಡಲಾಗುತ್ತಿದೆ.
ದಕ್ಷಿಣ ಕನ್ನಡ -2 ಜಿಲ್ಲೆಯ ಮಾನ್ಯ ನಿರ್ದೇಶಕರಾದ ಬಾಬು ನಾಯ್ಕ
ಕಾಸರಗೋಡು ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಇದೀಗ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಜ್ಞಾನ ತುಂಬುವ ಕಾರ್ಯಕ್ರಮ ಅಲ್ಲದೆ ಸೂರು ಇಲ್ಲದವನಿಗೆ ಸೂರು ಎಂಬ ಆಶಯದೊಂದಿಗೆ ಜಿಲ್ಲೆಯಲ್ಲೂ ವಾಸಲ್ಯ ಸದಸ್ಯರಾದ ಯಮುನಾರಿಗೆ ಮನೆ ಮಂಜೂರಾಗಿದ್ದು ಅದರ ಉದ್ಘಾಟನೆಯ ಈಗಾಗಲೇ ನಡೆದಿರುತ್ತದೆ. ಈ ಕುಟುಂಬಕ್ಕೆ ಈಗಾಗಲೇ ಪ್ರಾಥಮಿಕ ಸರ್ವೇಕ್ಷಣೆ ನಡೆಸಿ ಚಾಪೆ ದಿಂಬು ಹೊದಿಕೆ ಪಾತ್ರೆ ಬಟ್ಟೆ ಬರೆ ಮುಂತಾದ ಪರಿಕರಗಳನ್ನೊಳಗೊಂಡ ವಾತ್ಸಲ್ಯ ಕಿಟ್ ವಿತರಿಸಲಾಗಿದೆ. ಮಗುವಿನ ವಿದ್ಯಾಭ್ಯಾಸಕ್ಕಾಗಿ ವಾತ್ಸಲ್ಯ ವಿದ್ಯಾನಿಧಿ ಮೂಲಕ ಬ್ಯಾಗ್, ಪುಸ್ತಕ,ಕಲಿಕಾ ಸಾಮಗ್ರಿ ವಿತರಿಸಲಾಗಿದೆ. ಇವರ ಆರೋಗ್ಯ ಸುಧಾರಣೆಗೆ ಮಾಸಿಕ 2 ಕೆಜಿಯಂತೆ “ವಾತ್ಸಲ್ಯ ಮಿಕ್ಸ್ “ಎನ್ನುವ ಫುಡ್ ನೀಡಲಾಗುತ್ತಿದೆ.ಹೀಗೆ ಮಾತೃಶ್ರೀ ಹೇಮಾವತಿ ಅಮ್ಮನವರ ಅಧ್ಯಕ್ಷತೆಯಲ್ಲಿ ನಡೆಯುವ ಜ್ಞಾನವಿಕಾಸ ಕಾರ್ಯಕ್ರಮವು ಇಂದು ಜನಪ್ರಿಯ ಕಾರ್ಯಕ್ರಮವಾಗಿ ಬೆಳೆದು ಬಂದಿದ್ದು ಗಡಿನಾಡು ಕಾಸರಗೋಡು ತಾಲೂಕಿನಲ್ಲಿ ಒಟ್ಟು 25 ಜ್ಞಾನವಿಕಾಸ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು ಒಟ್ಟು141 ತಂಡಗಳಲ್ಲಿ 1288ಮಂದಿ ಕೇಂದ್ರಗಳ ಸದಸ್ಯರಾಗಿರುತ್ತಾರೆ ..
ಅಖಿಲೇಶ್ ನಗುಮಗಂ ಕಾಸರಗೋಡು ಜನಜಾಗ್ರತಿ ವೇದಿಕೆ ಅಧ್ಯಕ್ಷ
..ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲೆಯಲ್ಲಿ ಹಲವು ನೂತನ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದು ಜಿಲ್ಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿದೆ ಇದೀಗ ನಮ್ಮ ಪಂಚಾಯತಿಗಳ ಪಟ್ಟ ಯಮುನಾ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಟ್ಟು ಅವರಿಗೆ ಆಸರೆಯಾಗಿದೆ ಯೋಜನೆಯ ಎಲ್ಲಾ ಕಾರ್ಯಗಳಿಗೂ ನಮ್ಮ ಪೂರ್ಣ ಸಹಕಾರವಿದೆ..














