ಮೂಢನಡುಗೋಡು ಶ್ರೀ ಜಗದಂಬಿಕಾ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರ ದಡ್ಡಲಕಾಡು ಇದರ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಸಹಾಯಧನದ ಡಿಡಿ ಹಸ್ತಾಂತರ-ಕಹಳೆನ್ಯೂಸ್

ಬಂಟ್ವಾಳ : ಮೂಢನಡುಗೋಡು ಶ್ರೀ ಜಗದಂಬಿಕಾ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರ ದಡ್ಡಲಕಾಡು ಇದರ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ 5 ಲಕ್ಷ ರೂಪಾಯಿ ಸಹಾಯಧನ ಮಂಜೂರಾಗಿದ್ದು ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ದಿನೇಶ್ ಡಿ ಯವರು ಸಮಿತಿ ಸದಸ್ಯರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹರಿಕೃಷ್ಣ ಬಂಟ್ವಾಳ, ರಾಮದಾಸ್ ಬಂಟ್ವಾಳ, ಸುಲೋಚನಾ ಜೆ ಕೆ ಭಟ್, ಸಂಜೀವ ಪೂಜಾರಿ, ದರ್ನಪ್ಪ ಪೂಜಾರಿ, ಸದಾನಂದ ನಾವೂರ್, ಪುರುಷೋತ್ತಮ ಪೂಜಾರಿ, ರಾಜೇಶ್ ನಾಯ್ಕ್ ನೆಕ್ಕರೆ, ಭಾಸ್ಕರ್ ಕುಲಾಲ ಅಧ್ಯಕ್ಷರು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಮೂಢನಡುಗೋಡು, ಜಯಾನಂದ್ ಪಿ ಯೋಜನಾಧಿಕಾರಿ ಬಂಟ್ವಾಳ ತಾಲೂಕು, ಚಿತ್ರಾಕ್ಷಿ ದಡ್ಡಲಕಾಡು, ಜಯರಾಜ್ ಕರೆಂಕಿ, ವಲಯ ಮೇಲ್ವಿಚಾರಕರು ರಾಜೇಶ್ ನಾಯ್ಕ್, ಸೇವಾಪ್ರತಿನಿಧಿ ಪ್ರಪುಲ್ಲ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.














