ಪುಣಚ: ಸಂಕೇಶ ಕೊಡಂಗೆ ಸಾಲಿಯಾನ್ ಕುಟುಂಬಸ್ಥರ ನೂತನ ತರವಾಡು ಮನೆ ಗೃಹಪ್ರವೇಶ, ಬ್ರಹ್ಮಕಲಶೋತ್ಸವ, ನೇಮೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ-ಕಹಳೆನ್ಯೂಸ್

ಪುಣಚ: ಪುಣಚ ಗ್ರಾಮದ ಸಂಕೇಶ ಕೊಡಂಗೆ ಸಾಲಿಯಾನ್ ಕುಟುಂಬಸ್ಥರ ನೂತನ ತರವಾಡು ಮನೆಯ ಗೃಹಪ್ರವೇಶ, ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಮಾ.29ರಿಂದ ಎ.1ರವರೆಗೆ ವಿವಿಧ ಧಾರ್ಮಿಕ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಂಕೇಶ ಕೊಡಂಗೆ ಧೂಮಾವತಿ ದೈವಸ್ಥಾನದ ಬಳಿ ಮಾ.8ರಂದು ಬೆಳಿಗ್ಗೆ ನಡೆಯಿತು.
ಆರಂಭದಲ್ಲಿ ಕೊಡಂಗೆ ಧೂಮಾವತಿ ದೈವಸ್ಥಾನದ ಎದುರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ಸಂಕೇಶ ಕೊಡಂಗೆ ಸಾಲಿಯಾನ್ ಕುಟುಂಬದ ತರವಾಡು ಮನೆ ಸಮಿತಿ ಜೊತೆ ಕಾರ್ಯದರ್ಶಿ ನಾರಾಯಣ ಪೂಜಾರಿ ಕುರಿಕ್ಕಾರ ಮಾತನಾಡಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಕಾರ್ಯಕ್ರಮ ಯಶಸ್ವಿಯಾಗಲು ಪ್ರತಿಯೊಬ್ಬರು ಸರ್ವ ರೀತಿಯಲ್ಲಿ ಸಹಕರಿಸುವಂತೆ ವಿನಂತಿಸಿದರು. ಈ ಸಂದರ್ಭ ಕುಟುಂಬದ ಹಿರಿಯರಾದ ಸಾಂತಪ್ಪ ಪೂಜಾರಿ ಮಣಿಲ, ತರವಾಡು ಮನೆ ಸಮಿತಿ ಅಧ್ಯಕ್ಷ ರಾಜೀವ ಪೂಜಾರಿ ಮುಂಡೋಡಿ, ಉಪಾಧ್ಯಕ್ಷ ರಾಮಣ್ಣ ಪೂಜಾರಿ ಪೊಡುಂಬು, ಕೋಶಾಧಿಕಾರಿ ಮಾಧವ ಸಾಲಿಯಾನ್ ಕೊಡಂಗೇರಿ, ಸದಸ್ಯರಾದ ಅಣ್ಣಿ ಸಾಲಿಯಾನ್ ಬೆಳ್ತಿಗೇರು, ಚಂದ್ರಶೇಖರ ಪೂಜಾರಿ ಬೋಲೋಡಿ, ಶ್ರೀಧರ ಸಾಲಿಯಾನ್ ಕೊಡಂಗೇರಿ, ಬಾಲಕೃಷ್ಣ ಪೂಜಾರಿ ಕಡಮ್ಮಗದ್ದೆ, ಸಾಂತಪ್ಪ ಪೂಜಾರಿ ಕಡಮಗದ್ದೆ, ವಾಸಪ್ಪ ಪೂಜಾರಿ ಪಿಲಿಂಜ, ಜಯರಾಮ ಪೂಜಾರಿ ಪದರಂಜ, ಐತ್ತಪ್ಪ ಪೂಜಾರಿ ಸಾಜ, ಶಂಭು ಸಾಲಿಯಾನ್ ಸಾಜ, ಅಚ್ಯುತ ಸಾಲಿಯಾನ್ ಮರಕ್ಕಡ, ಪ್ರದೀಪ್ ಸಾಲಿಯಾನ್ ಬೆಳ್ಳಾರೆ, ದೇಜಪ್ಪ ಪೂಜಾರಿ ಪಿಲಿಂಜ, ರವಿ ಪೂಜಾರಿ ಪಿಲಿಂಜ, ಭವಾನಿ ಕುರಿಕ್ಕಾರ, ಸರೋಜಿನಿ ಕಾಟುಕುಕ್ಕೆ, ಹರೀಶ್ ಪೂಜಾರಿ ಮಣಿಲ, ತಿಮ್ಮಪ್ಪ ಪೂಜಾರಿ ಸಾಜ, ಸೀತಾರಾಮ ಗುಂಡಿಮಜಲು, ಸಂಕೇಶ ಕೊಡಂಗೆ ಮನೆ ನಾಗಪ್ಪ ಪೂಜಾರಿ, ರಾಕೇಶ್ ಕೊಡಂಗೆ, ಕಿಶನ್ ಕೊಡಂಗೆ, ನಿಖಿಲ್ ಕೊಡಂಗೆ, ಯತಿನ್ ಕೊಡಂಗೆ, ದೀಕ್ಷಿತ್ ಕೊಡಂಗೆ, ಮಿಥುನ್ ಕೊಡಂಗೆ, ಜಗತ್ ಕೊಡಂಗೆ, ಸುಪ್ರೀತ್ ಕೊಡಂಗೆ, ಕೃಷ್ಣಪ್ಪ ಪೂಜಾರಿ ಕೊಡಂಗೆ, ಗಂಗಾಧರ ಪೂಜಾರಿ ಕೊಡಂಗೆ, ಬಾಬು ಪೂಜಾರಿ ಕೊಡಂಗೆ ಮತ್ತಿತರರು ಉಪಸ್ಥಿತರಿದ್ದರು.














