ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ವರ್ಧಿ ರಜತ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಸತೀಶ್ ಅಲಿಯಾಸ್ ಡಾಗ್ ಸತೀಶ್ ಅವರು ದೂರು ನೀಡಿದ್ದು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಬಿಎನ್‌ಎಸ್ ಸೆಕ್ಷನ್ 351 , 352 ರ ಆಡಿ ರಜತ್ ಮತ್ತು ಧನರಾಜ್ ಮೇಲೆ ಕೇಸ್ ದಾಖಲು ಮಾಡಿದ್ದಾರೆ.
ದೂರಿನಲ್ಲಿ ಏನಿದೆ?
ಕಳೆದ ವರ್ಷದ ಡಿ.12 ರಂದು ರಜತ್ ಕರೆ ಮಾಡಿ ನಾನು ಮತ್ತು ನನ್ನ ಸ್ನೇಹಿತ ಧನರಾಜ್ ಇಬ್ಬರು ಸೇರಿ ಒಂದು ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿದ್ದೇವೆ. ಚಾನೆಲ್ ಆರಂಭದಲ್ಲಿ ನಿಮ್ಮ ಸಂದರ್ಶನವನ್ನು ಹಾಕುತ್ತೇವೆ ಎಂದು ಹೇಳಿ ನನ್ನನ್ನು ಮಾತನಾಡಿಸಿದ್ದರು. ಆದರೆ ಅಪ್ಲೋಡ್ ಮಾಡುವಾಗ ನನ್ನ ಸಂಭಾಷಣೆಯನ್ನು ತಿರುಚಿ ನನಗೆ ಅವಮಾನ ಮಾಡಿದ್ದಾರೆ.
ಎರಡು ಕ್ಯಾಮೆರಾ ಮತ್ತು ಎರಡು ಮೊಬೈಲ್ ನಲ್ಲಿ ನಾಲ್ಕು ಮಂದಿ ಸಂದರ್ಶನವನ್ನು ಶೂಟ್ ಮಾಡಿದ್ದರು. ಈ ಫೆಬ್ರವರಿ 27 ರಂದು ರಾತ್ರಿ 10:30ಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮೆಸೇಜ್ ಹಾಕಿದ್ದಕ್ಕೆ ರಜತ್ ಅವರು ನನ್ನ ಮೇಲೆ ಕೊಲೆ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ ಆತನ ಫೋನಿನಿಂದ ಮಧ್ಯರಾತ್ರಿ ಕೊಲೆ ಬೆದರಿಕೆ ಬರುತ್ತಿತ್ತು. ರಜತ್ ಮತ್ತು ಧನರಾಜ್ ಉದ್ದೇಶಪೂರ್ವಕವಾಗಿ ಮಾನಹಾನ ಮಾಡಿ ಬೈದಿದ್ದಾರೆ. ಇವರ ವಿರುದ್ಧ ಕ್ರಮಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.














