Wednesday, March 11, 2026
ದೆಹಲಿರಾಜ್ಯಸುದ್ದಿ

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 60 ರೂ. ಏರಿಕೆ – ಕಹಳೆ ನ್ಯೂಸ್

ವದೆಹಲಿ: ನಿರೀಕ್ಷೆಯಂತೆ ಕೊಲ್ಲಿ ಯುದ್ಧದ ಬಿಸಿ ನಮ್ಮ ಮನೆ ಬಾಗಿಲಿಗೆ ತಟ್ಟಿದೆ. ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ದರ 60 ರೂ. ಏರಿಕೆಯಾದರೆ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್‌ ದರ 115 ರೂ. ಏರಿಕೆಯಾಗಿದೆ.

ಪರಿಷ್ಕೃತ ದರ ಶನಿವಾರದಿಂದಲೇ ಜಾರಿಗೆ ಬಂದಿದೆ. ದರ ಏರಿಕೆಯಿಂದ ಹೋಟೆಲ್‌, ರೆಸ್ಟೋರೆಂಟ್‌, ಸಣ್ಣ ವಾಣಿಜ್ಯ ಸಂಸ್ಥೆಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಾವ ನಗರದಲ್ಲಿ ಎಷ್ಟು?
ದರ ಏರಿಕೆಗೂ ಮೊದಲು ಬೆಂಗಳೂರಿನಲ್ಲಿ ಗೃಹ ಬಳಕೆಯ ಸಿಲಿಂಡರ್‌ ದರ 855.50 ರೂ. ಇತ್ತು. ಈಗ ಇದು 915.50 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ 913 ರೂ., ಮುಂಬೈನಲ್ಲಿ 912.50 ರೂ., ಚೆನ್ನೈನಲ್ಲಿ 928.50 ರೂ.ಗೆ ಏರಿಕೆಯಾಗಿದೆ. ಏಪ್ರಿಲ್ 2025 ರಿಂದ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪರಿಷ್ಕರಣೆಯಾಗಿರಲಿಲ್ಲ.

ಜಾಹೀರಾತು
ಜಾಹೀರಾತು

ಜನವರಿಯಿಂದ ಅಮೆರಿಕದಿಂದ ಎಲ್‌ಪಿಜಿ ಭಾರತಕ್ಕೆ ಬರಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. 2025 ರ ನವೆಂಬರ್‌ನಲ್ಲಿ ಭಾರತೀಯ ಪಿಎಸ್‌ಯು ತೈಲ ಕಂಪನಿಗಳು 2026 ರ ಒಪ್ಪಂದ ವರ್ಷಕ್ಕೆ ಯುಎಸ್ ಗಲ್ಫ್ ಕರಾವಳಿಯಿಂದ ಸುಮಾರು 2.2 MTPA ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳಲು ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿವೆ.