Friday, March 6, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಾರ್ಚ್ 6ರಂದು ಟಾಕೀಸ್ ಆ್ಯಪ್‌ನಲ್ಲಿ’ಧರ್ಮ ಚಾವಡಿ’ಬಿಡುಗಡೆ: ಕನ್ನಡಕ್ಕೂ ಡಬ್ ಆಗಲಿದೆ ಚಿತ್ರ -ಕಹಳೆ ನ್ಯೂಸ್

ಮಂಗಳೂರು  : ಕೃಷ್ಣವಾಣಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಜಗದೀಶ್ ಅಮೀನ್ ನಿರ್ಮಾಣದ, ಕಳೆದ ವರ್ಷ ಕರಾವಳಿಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡ ತುಳು ಚಲನಚಿತ್ರ ‘ಧರ್ಮ ಚಾವಡಿ’ ಇದೀಗ ಮಾರ್ಚ್ 6ರಂದು ಟಾಕೀಸ್ ಆ್ಯಪ್ (Talkies App) OTT ಮೂಲಕ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ರಕ್ಷನ್ ಮಾಡೂರು, ಚಿತ್ರಮಂದಿರಗಳಲ್ಲಿ ಭಾರಿ ಜನಮನ್ನಣೆ ಪಡೆದ ಈ ಚಿತ್ರ ಇದೀಗ ಡಿಜಿಟಲ್ ವೇದಿಕೆಯ ಮೂಲಕ ಅನಿವಾಸಿ ತುಳುವರಿಗೂ ಲಭ್ಯವಾಗಲಿದೆ. ಚಿತ್ರದ ಕಥೆಗಾರ ಮತ್ತು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಈ ಹಿಂದೆ ‘ಧರ್ಮ ದೈವ’ ಚಿತ್ರದ ಮೂಲಕ ಗಮನ ಸೆಳೆದಿದ್ದರು. ಅವರ ನಿರ್ದೇಶನದ ಈ ಚಿತ್ರವು ಧರ್ಮ ಮತ್ತು ದೈವದ ಸತ್ವವನ್ನು ಒಳಗೊಂಡಿದೆ ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಟ ರಮೇಶ್ ರೈ ಕುಕ್ಕುವಳ್ಳಿ ಮಾತನಾಡಿ, “ಮುಂದಿನ ದಿನಗಳಲ್ಲಿ ಈ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡಿ ಕರ್ನಾಟಕದ ಇತರ ಭಾಗಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ” ಎಂದು ಮಾಹಿತಿ ನೀಡಿದರು. ಕೊನೆಯಲ್ಲಿ ಮಾತನಾಡಿದ ನಟಿ ನೇಹಾ ಕೋಟ್ಯಾನ್, ಚಿತ್ರದ ಯಶಸ್ಸಿಗೆ ಸಹಕರಿಸಿದ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿ, OTT ಮೂಲಕವೂ ಚಿತ್ರಕ್ಕೆ ಉತ್ತಮ ಬೆಂಬಲ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು

ಚಿತ್ರದಲ್ಲಿ ರವಿ ಸ್ನೇಹಿತ್ ನಾಯಕನಾಗಿ ಮತ್ತು ಧನ್ಯ ಪೂಜಾರಿ ನಾಯಕಿಯಾಗಿ ನಟಿಸಿದ್ದಾರೆ. ತಾರಾಗಣದಲ್ಲಿ ಸುರೇಶ್ ರೈ, ಚೇತನ್ ರೈ ಮಾಣಿ, ರೂಪ ಶೆಟ್ಟಿ, ಸುಂದರ್ ರೈ ಮಂದಾರ, ದೀಪಕ್ ರೈ ಪಾಣಾಜೆ, ದಯಾನಂದ್ ರೈ ಮೊದಲಾದವರಿದ್ದಾರೆ. ಅರುಣ್ ರೈ ಪುತ್ತೂರು ಛಾಯಾಗ್ರಹಣ, ಪ್ರಸಾದ್ ಕೆ. ಶೆಟ್ಟಿ ಸಂಗೀತ ಮತ್ತು ರಝಾಕ್ ಪುತ್ತೂರು ಸಂಭಾಷಣೆ ನೀಡಿದ್ದಾರೆ.